ಬಾಗಲಕೋಟೆ:ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆ, ಜಮಖಂಡಿ ಮತ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ, ಉಪವಿಭಾಗಾಧಿಕಾರಿ ವಿಕ್ರಮ್, ತಹಶಿಲ್ದಾರ್ ಪ್ರಶಾಂತ ಚನಗೊಂಡ ಸೇರಿದಂತೆ ಇತರ ಅಧಿಕಾರಿಗಳು ಬೋಟ್ನಲ್ಲಿ ತೆರಳಿ ಪರಿಶೀಲನೆ ನಡೆಸಿದರು.
ಕೃಷ್ಣ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ, ಪರಿಶೀಲನೆ ನಡೆಸಿದ ಶಾಸಕ ಆನಂದ್ ನ್ಯಾಮಗೌಡ ಶಾಸಕರಾದ ಆನಂದ ನ್ಯಾಮಗೌಡ, ಬೋಟ್ನಲ್ಲಿ ತೆರಳಿ ಮುಳುಗಡೆ ಭೀತಿ ಹೊಂದಿರುವ ಮುತ್ತೂರು, ಮೈಗೂರು ಹಾಗೂ ಕಂಕಣವಾಡಿ ಗ್ರಾಮದ ಉಂಟಾಗಿದ್ದ ಪ್ರವಾಹ ಸ್ಥಳಗಳನ್ನು ಪರೀಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ, ಮಹಾರಾಷ್ಟ್ರ ರಾಜ್ಯದ ಕೊಯ್ನಾ ಜಲಾಶಯದಿಂದ 2.28 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ ಭೀತಿ ಹೊಂದಿವೆ. ಈಗಾಗಲೇ ಕೆಲ ಗ್ರಾಮದಲ್ಲಿ ನಡುಗಡ್ಡೆ ಭೀತಿ ಇದೆ. ಸರ್ಕಾರದಿಂದ ತುರ್ತು ಪರಿಸ್ಥಿತಿ ನಿವಾರಿಸಲು ಈಗಾಗಲೇ 13 ಕೋಟಿ ರೂ ನೀಡಿದೆ. ಅಗತ್ಯ ಬಿದ್ದರೆ ಹೆಚ್ಚು ಪ್ರವಾಹ ಉಂಟಾದ ಗ್ರಾಮದ ಜನತೆಗೆ ಜಾನುವಾರ ಸ್ಥಳಾಂತರ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಬೋಟ್ ವ್ಯವಸ್ಥೆ, ಜನತೆಯ ಆರೋಗ್ಯದ ಬಗ್ಗೆ ಹಾಗೂ ತೊಂದರೆಗೆ ಒಳಗಾದ ಗ್ರಾಮದವರಿಗೆ 24*7 ಹೆಲ್ಪ್ಲೈನ್ ವ್ಯವಸ್ಥೆ, ನೋಡಲ್ ಅಧಿಕಾರಿಗಳನ್ನು ಮತ್ತು 50 ಜನರ ನುರಿತ ಈಜುಗಾರರನ್ನು ನೇಮಿಸಲಾಗಿದೆ. ಪ್ರವಾಹ ಭೀತಿ ಹಿನ್ನೆಲೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.