ಬಾಗಲಕೋಟೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಜಂಟಿಯಾಗಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೊನಾ ಪಿಡುಗು ತಡೆಗೆ ಮುನ್ನೆಚ್ಚರಿಕೆ: ಚೆಕ್ಪೋಸ್ಟ್ಗೆ ಡಿಸಿ,ಎಸ್ಪಿ ಭೇಟಿ, ಪರಿಶೀಲನೆ - ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ
ಚೆಕ್ಪೋಸ್ಟ್ಗಳ ಮೂಲಕ ಹೋಗುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಕೊರೊನಾ ಪರೀಕ್ಷೆಗೆ ಒಳಪಡಿಸಿದವರ ಮಾಹಿತಿಯ ವರದಿಯನ್ನು ಪ್ರತಿದಿನ ನೀಡಬೇಕೆಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕೋವಿಡ್-19: ಚೆಕ್ಪೋಸ್ಟ್ಗೆ ಭೇಟಿ ನೀಡಿದ ಡಿಸಿ,ಎಸ್ಪಿ
ಹುನಗುಂದ ತಾಲೂಕಿನ ನಂದವಾಡಗಿ, ಇಲಕಲ್ಲ ತಾಲೂಕಿನ ಹನಮನಾಳ ಹಾಗೂ ಬಾದಾಮಿ ತಾಲೂಕಿನ ಗೋವಿಂದಕೊಪ್ಪ ಚೆಕ್‍ಪೋಸ್ಟ್‍ಗಳಿಗೆ ತೆರಳಿ ಕರ್ತವ್ಯ ನಿರತ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು.
ಚೆಕ್ಪೋಸ್ಟ್ಗಳ ಮೂಲಕ ಹೋಗುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಕೊರೊನಾ ಪರೀಕ್ಷೆಗೆ ಒಳಪಡಿಸಿದವರ ಮಾಹಿತಿಯ ವರದಿಯನ್ನು ಪ್ರತಿದಿನ ನೀಡಬೇಕೆಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.