ಕರ್ನಾಟಕ

karnataka

ETV Bharat / state

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ: ಬೆಚ್ಚಿಬಿದ್ದ ಬಾಗಲಕೋಟೆ - ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮ

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಶಿವಪ್ಪ ಯಮನಮ್ಮ ಪೂಜಾರಿ ಹಾಗೂ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಮಲ್ಲಪ್ಪ ತಳಗೇರಿ(62) ವಿಠ್ಠಲ ತಳಗೇರಿ(46) ಕೊಲೆಯಾದವರು. ಈ ಮೂವರ ಕೊಲೆಯಿಂದ ಜಿಲ್ಲೆಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ

By

Published : Oct 15, 2019, 11:26 PM IST

Updated : Oct 16, 2019, 6:51 AM IST

ಬಾಗಲಕೋಟೆ: ಎರಡು ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಶಿವಪ್ಪ ಯಮನಮ್ಮ ಪೂಜಾರಿ(43) ಅವರನ್ನ ಎಂಟು ಜನರ ತಂಡ ಹಲ್ಲೆ ನಡೆಸಿ ಕೊಂದಿದೆ. ಶೇಖರಪ್ಪ ಪೂಜಾರಿ, ಗ್ಯಾನೆಪ್ಪ ಪೂಜಾರಿ,ಶಿವಪ್ಪ ಯಲ್ಲಪ್ಪ ಇದ್ದಲಗಿ,ಮುತ್ತಪ್ಪ ಪೂಜಾರಿ,ಶ್ರೀಶೈಲ್ ಪೂಜಾರಿ ಸೇರಿದಂತೆ ಎಂಟು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಘಟನೆ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ

ಇನ್ನು ಮಂಗಳವಾರ ಸಂಜೆ ವೈಯಕ್ತಿಕ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ತಂದೆ, ಮಗನ ಬರ್ಬರ ಹತ್ಯೆ ಮಾಡಲಾಗಿದೆ. ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ತಳಗೇರಿ(62) ವಿಠ್ಠಲ ತಳಗೇರಿ(46) ಕೊಲೆಯಾದವರು.

ದುಷ್ಕರ್ಮಿಗಳು ಈ ಇಬ್ಬರನ್ನೂ ಕೊಚ್ಚಿ ಕೊಂದು, ರಸ್ತೆ ಬದಿ ಬಿಸಾಕಿ ಹೋಗಿದ್ದಾರೆ. ಸ್ಥಳಕ್ಕೆ ಎಸ್.ಪಿ.ಲೋಕೇಶ್​ ಜಗಲಸಾರ ಹಾಗೂ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ‌ ಎರಡು ಘಟನೆಗಳಿಂದ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ.

Last Updated : Oct 16, 2019, 6:51 AM IST

ABOUT THE AUTHOR

...view details