ಕರ್ನಾಟಕ

karnataka

ETV Bharat / state

2500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಉಳಿಯುತ್ತದೆ: ಡಿಸಿಎಂ ಗೋವಿಂದ ಕಾರಜೋಳ - ನೆರೆ ಪೀಡಿತ ಸಂತ್ರಸ್ತರು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಭಾಷೆ ಹೇರಿಕೆ ಮಾಡುವ ವಿವಾದಕ್ಕೆ ತೆರೆ ಎಳೆದಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, 2500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಉಳಿಯಲಿದೆ ಎಂದಿದ್ದಾರೆ.

ಗೋವಿಂದ ಕಾರಜೋಳ

By

Published : Sep 15, 2019, 12:56 PM IST

ಬಾಗಲಕೋಟೆ: 2500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಉಳಿಯಲಿದೆ ಎಂದುಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಗೋವಿಂದ ಕಾರಜೋಳ ಮಾತನಾಡಿದ್ದಾರೆ

ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ ಎಂಬ ಯೋಜನೆಯ ಜಾಗೃತಿ ಜಾಥಾಗೆ ಚಾಲನೆ ನೀಡಿದ ನಂತರ ಈ ಟಿವಿ ಭಾರತದ ಜೊತೆ ಮಾತನಾಡಿದರು. ಮುಸ್ಲಿಂ ರಾಜರ ಆಡಳಿತ ಕಾಲದಿಂದಲೂ ಕನ್ನಡ ಭಾಷೆ ಬಂದಿದೆ. ಅಮಿತ್ ಶಾ ಅವರ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಈ ಬಗ್ಗೆ ಗೊಂದಲ ಬೇಡಾ. ಕನ್ನಡ ಭಾಷೆ ಉಳಿಯಲಿದೆ ಎಂದು ತಿಳಿಸಿದ್ದಾರೆ.

ಇದೇ ಸಮಯದಲ್ಲಿ ಮಾತನಾಡಿದ ಅವರು ನೆರೆ ಪೀಡಿತ ಸಂತ್ರಸ್ತರಿಗೆ ಎಲ್ಲ ಸೌಲಭ್ಯ ನೀಡಲು ಈಗಾಗಲೇ ಹಾನಿಗೊಳಗಾಗಿರುವ ಮನೆಗಳ ಸರ್ವೆ ಹಾಗೂ ಬೆಳೆ ಹಾನಿ ಸರ್ವೆ ಮಾಡಿಸಲಾಗಿದೆ. ಇನ್ನು ಯಾವುದಾದರೂ ಉಳಿದಿದ್ದರ ಬಗ್ಗೆ ಮಾಹಿತಿ ಪಡೆದುಕೊಂಡು ಸರ್ವೆ ಮಾಡಿ ಎಲ್ಲಾ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದೇ ಸಮಯದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ನಂತರ ಜಿಲ್ಲಾಡಳಿತ ಭವನದಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯವರೆಗೆ ಜಾಥಾ ನಡೆಸಲಾಯಿತು.

ABOUT THE AUTHOR

...view details