ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ, ಆದ್ರೂ ನನ್ನ ಕಣ ಕಣದಲ್ಲೂ ಕನ್ನಡ ಇದೆ: ನಾರಾಯಣಗೌಡ - ಸಚಿವ ನಾರಾಯಣ ಗೌಡ ಹೇಳಿಕೆ

ನಾನೋರ್ವ ಬಡ ಕುಟುಂಬದಲ್ಲಿ ಜನಿಸಿದವನು, ನನ್ನ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋದವನು ಆದರೆ ನಾನೆಂದಿಗೂ ಕನ್ನಡಿಗನೇ, ನನ್ನ ಕಣ ಕಣದಲ್ಲೂ ಕನ್ನಡದ ರಕ್ತ ಹರಿಯುತ್ತಿದೆ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.

Narayangouda Stated
ನಾರಾಯಣಗೌಡ ಸ್ಪಷ್ಟನೆ

By

Published : Feb 28, 2020, 2:10 PM IST

ಬಾಗಲಕೋಟೆ:ನಾನೋರ್ವ ಬಡ ಕುಟುಂಬದಲ್ಲಿ ಜನಿಸಿದವನು, ನನ್ನ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋದವನು ಆದರೆ ನಾನೆಂದಿಗೂ ಕನ್ನಡಿಗನೇ, ನನ್ನ ಕಣ ಕಣದಲ್ಲೂ ಕನ್ನಡದ ರಕ್ತ ಹರಿಯುತ್ತಿದೆ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.

ಸಚಿವರು ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರದಲ್ಲಿ ನನ್ನ ವ್ಯವಹಾರ ಇದೆ, ಅದು ನಂಗೆ ಅನ್ನ ಕೊಟ್ಟಿದೆ ಹಾಗಂದ ಮಾತ್ರಕ್ಕೆ ನಾನು ಕನ್ನಡದವನಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೇವಲ ಮುಂಬೈನಲ್ಲೆ 27 ಲಕ್ಷ ಜನ ಕನ್ನಡಿಗರಿದ್ದಾರೆ, ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಕೇವಲ ಮಹಾರಾಷ್ಟ್ರವನ್ನ ಮಾತ್ರ ಹೊಗಳಿಲ್ಲ ಎಲ್ಲಾ ರಾಜ್ಯದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಯಾರೋ ಕಿಡಿಗೇಡಿಗಳು ರಾಜಕೀಯ ದುರುದ್ದೇಶಪೂರಿತವಾಗಿ ಆ ವಿಡಿಯೋ ತುಣಕನ್ನ ತಮಗೆ ಬೇಕಾದಷ್ಟಕ್ಕೆ ಮಾತ್ರ ಕಟ್​​ ಮಾಡಿ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದರು.

ನಾರಾಯಣಗೌಡ ಸ್ಪಷ್ಟನೆ

ಮಹಾರಾಷ್ಟ್ರ ಬಗ್ಗೆ ಮಾತನಾಡಿದ ಕಾರಣದಿಂದಾಗಿ ನಾನು ಕನ್ನಡಿಗನಲ್ಲ, ಕನ್ನಡದ ಬಗ್ಗೆ ನನಗೆ ಅಭಿಮಾನ ಇಲ್ಲ ಎನ್ನುವುದು ಸರಿಯಲ್ಲ, ನಾನು ಎಂದೆಂದಿಗೂ ಕನ್ನಡಿಗನೇ ಎಂದು ನಾರಯಣ ಗೌಡ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details