ಬಾಗಲಕೋಟೆ:ಆಧುನಿಕತೆ ಪ್ರಭಾವ ಎಲ್ಲ ಹಬ್ಬಗಳ ಮೇಲೂ ಬೀರುತ್ತಿದೆ. ಇದೀಗ ಹೋಳಿ ಹಬ್ಬದ ಕಾಮಣ್ಣ ಸಹ ಆಧುನಿಕತೆ ಸ್ಫರ್ಶ ಪಡೆದಿದ್ದಾನೆ. ಜಿಲ್ಲೆಯ ಬನಹಟ್ಟಿಯ ಬಕರೆಯವರ ನಿವಾಸದಲ್ಲಿ ತಯಾರಿಸಿದ ಕಾಮಣ್ಣನ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನಬವಾಗಿವೆ.
ಸ್ಪೈಡರ್ ಮ್ಯಾನ್ ಮೇಲೆ ಕುಳಿತ ಕಾಮಣ್ಣ, ಜೋಕಾಲಿ ಆಡ್ತಿರುವ ಕಾಮಣ್ಣ, ಕ್ರಿಕೆಟ್, ಮೊಬೈಲ್ , ಮಕ್ಕಳ ಛೋಟಾ ಭೀಮ್ ಹೆಗಲ ಮೇಲೆ ಕುಳಿತ ಕಾಮಣ್ಣ, ಗರುಡ ಪಕ್ಷಿಯ ಮೇಲೆ ಕುಳಿತ ಕಾಮಣ್ಣ, ದ್ವಿಚಕ್ರ ವಾಹನ ಮೇಲೆ ಕುಳಿತಿರುವ ಕಾಮಣ್ಣ ಹೀಗೆ ಹಲವಾರು ಭಂಗಕಿಯಲ್ಲಿರುವ ಕಾಮಣ್ಣನ ಮೂರ್ತಿಗಳು ಒಂದೇ ಕಡೆ ನೋಡುವಲ್ಲಿ ಬಲು ಆಕರ್ಷಣೀಯವಾಗಿವೆ.
ನಹಟ್ಟಿಯ ನಾರಾಯಣ ಬಕರೆ ಅವರ ಮಕ್ಕಳಾದ ವಿಜಯಾನಂದ, ಸಂಜಯ, ನಿತ್ಯಾನಂತ ಹಾಗು ನಂದಾ ಬಕರೆಯವರು ಕಾಮಣ್ಣನ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ನಾರಾಯಣ ಬಕರೆಯವರು ಕಳೆದ ಆರು ದಶಕಗಳಿಂದ ಈ ವಿಗ್ರಹಗಳನ್ನು ಮಾಡುತ್ತ ಬಂದಿದ್ದಾರೆ. ಇದೇ ಕಾಯಕವನ್ನು ಮಕ್ಕಳು ಮುಂದುವರೆಸಿದ್ದಾರೆ. ಈ ಮೊದಲು ಒಂದೇ ತರಹದ ಕಾಮಣ್ಣನ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಕಳೆದ ಐದಾರು ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಕಾಮಣ್ಣನ ವಿಗ್ರಹಗಳನ್ನು ಜನರು ಕೇಳುತ್ತಿರುವುದರಿಂದ ಆಧುನಿಕತೆಯ ಬದಲಾವಣೆ ತೆರೆದುಕೊಳ್ಳುತ್ತಿರುವ ಕಾರಣ ನಾವೂ ಕೂಡ ಕಾಮಣ್ಣನ ಮೂರ್ತಿಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ವಿಜಯಾನಂದ ಬಕರೆ.