ಬಾಗಲಕೋಟೆ :ಜೆಡಿಎಸ್ ಕೋಮವಾದಿ ಬಿಜೆಪಿ ಜೊತೆ ಸೇರಿದೆ. ಹೀಗಾಗಿ, ಜೆಡಿಎಸ್ನಲ್ಲಿ ಎಸ್ ಅಕ್ಷರವನ್ನು ತೆಗೆಯಬೇಕಾಗಿದೆ ಎಂದು ಶಾಸಕ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.
ಕೋಮವಾದಿ ಬಿಜೆಪಿ ಜತೆ ಸೇರಿರುವ ಜೆಡಿಎಸ್ ಈಗ ಸತ್ತಿರುವ ಪಕ್ಷ.. ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ
2006ರಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಒಳ್ಳೇ ಆಡಳಿತ ನಡೆಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಜೆಡಿಎಸ್ 60 ಸ್ಥಾನಕ್ಕಿಂತ ಹೆಚ್ಚು ಪಡೆದಿದ್ದರೆ ಕುಮಾರಸ್ವಾಮಿ ತಾಖತ್ತು ಏನೆಂದು ಗೊತ್ತಾಗುತ್ತಿತ್ತು ಎಂದಿದ್ದಾರೆ..
ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಮಾತನಾಡಿದ ಅವರು, ಜೆಡಿಎಸ್ನವರು ಗೋಹತ್ಯೆ ನಿಷೇಧಕ್ಕೆ ಬೆಂಬಲ ನೀಡಿದ್ದಾರೆ. ಹಿಂದೆ ಜೆಡಿಎಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ದಾಗ 59 ಸ್ಥಾನ ಗೆದ್ದಿತ್ತು. ಈಗ ಕುಮಾರಸ್ವಾಮಿ ನಾಯಕರಾಗಿದ್ದು ಈವರೆಗೆ ಆ ನಂಬರ್ ಮುಟ್ಟಲು ಸಾಧ್ಯವಾಗಿಲ್ಲ.
2006ರಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಒಳ್ಳೇ ಆಡಳಿತ ನಡೆಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಜೆಡಿಎಸ್ 60 ಸ್ಥಾನಕ್ಕಿಂತ ಹೆಚ್ಚು ಪಡೆದಿದ್ದರೆ ಕುಮಾರಸ್ವಾಮಿ ತಾಖತ್ತು ಏನೆಂದು ಗೊತ್ತಾಗುತ್ತಿತ್ತು ಎಂದಿದ್ದಾರೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್.