ಬಾಗಲಕೋಟೆ:ಬಸವ ಧರ್ಮ ಪೀಠದ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಲು ಬರುವುದಿಲ್ಲ. ಮಾತೆ ಮಾತಾಜೀ ಅವರು ತಮ್ಮ ಮೃತ್ಯು ಪತ್ರ ಉಲ್ಲೇಖ ಮಾಡಿದ್ದಾರೆ. ಕೆಲವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಸ್ವಾಮೀಜಿ ಮಹಾದೇವ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಅವರು ಬಾಗಲಕೋಟೆ ನವನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ಇತ್ತೀಚಿಗೆ ಡಾ. ಚನ್ನಬಸವ ಸ್ವಾಮೀಜಿ ಕೂಡಲಸಂಗಮ ಬಸವ ಧರ್ಮ ಪೀಠದ ವಿರುದ್ಧ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಬಸವಣ್ಣನವರ ವಚನದಲ್ಲಿ ವಚನಾನಂದ ನಾಮಪದ ಬಳಕೆ ಬಗ್ಗೆ ವಿವಾದ ಮಾಡುತ್ತಿರುವ ಜೊತೆಗೆ ಈಗಿರುವ ಗಂಗಾಮಾತೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಗಂಗಾ ಮಾತೆಗೆ ಹಿಂದಿ ಬರಲ್ಲ, ಸರಿಯಾಗಿ ವಿವೇಚನ ಮಾಡಲ್ಲ ಎಂಬ ಮಾತು ಸೇರಿದಂತೆ ಆಸ್ತಿ ಕಬಳಿಸುವ ಆರೋಪ ಮಾಡಿದ್ದರಿಂದ ಪೀಠದದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ಸ್ವಾಮೀಜಿ, ಗಂಗಾ ಮಾತೆಯ ಸಹೋದರಿಗೆ ಹಕ್ಕು ಬಿಟ್ಟು ಕೊಟ್ಟ ಪ್ರಮಾಣ ಪತ್ರ ನೀಡಿರುವುದಾಗಿ ತಿಳಿಸಿದ್ದಾರೆ. ಆ ರೀತಿಯಾಗಿ ಮಾಡಲು ಬರಲ್ಲ, ಆಸ್ತಿ ಕಬಳಿಕೆ ಮಾಡಲು ಸಾಧ್ಯವೇ ಆಗಲ್ಲ. ಬಸವ ಧರ್ಮ ಪ್ರಚಾರ ಮಾಡುತ್ತಾ ಇರಬಹುದು. ಆದರೆ, ಆಸ್ತಿಯನ್ನು ಯಾರಿಗೂ ಬರೆದುಕೊಡ ಬರಲ್ಲ. ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಹಾದೇವ ಸ್ವಾಮೀಜಿ ಡಾ. ಚನ್ನಬಸವ ಸ್ವಾಮೀಜಿಗೆ ಟಾಂಗ್ ನೀಡಿದರು.
ಶರಣ ಮೇಳ:ಇದೇ ಜನವರಿ 11 ರಿಂದ 14 ರವರೆಗೆ ಐದು ದಿನಗಳ ಕಾಲ ಪ್ರತಿ ವರ್ಷದಂತೆ ಈ ಸಾರಿಯು ಶರಣ ಮೇಳವು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಹಿನ್ನೆಲೆ ಅದ್ಧೂರಿಯಾಗಿ ಆಚರಣೆ ಮಾಡಿಲ್ಲ. ಈ ಭಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.