ಕರ್ನಾಟಕ

karnataka

ETV Bharat / state

ಮೇ 12 ರವರೆಗೆ ಜನತಾ ಕರ್ಫ್ಯೂ: ದಿನಸಿಗಾಗಿ ಮುಗಿಬಿದ್ದ ಜನ - ದಿನಸಿಗಾಗಿ ಮುಗಿಬಿದ್ದ ಜನ

ಬಾಗಲಕೋಟೆಯ ಬಸವೇಶ್ವರ ವೃತ್ತ, ವಲ್ಲಭಭಾಯಿ ಚೌಕ, ತರಕಾರಿ ಮಾರುಕಟ್ಟೆ, ಸರಾಫ್ ಬಜಾರ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಗ್ರಾಮೀಣ ಭಾಗದ ಜನತೆ ಹಾಗೂ ನಗರ ಪ್ರದೇಶದ ಜನತೆ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದರು. ತರಕಾರಿ ಸೇರಿದಂತೆ ಕಿರಾಣಿ ಅಂಗಡಿಗಳ ಮೇಲೆ ಮುಗಿ ಬಿದ್ದು, ದಿನಸಿ ವಸ್ತುಗಳನ್ನು ಖರೀದಿಸಿದರು.

ನಾಳೆಯಿಂದ ಮೇ 12 ರವರೆಗೆ ಜನತಾ ಕರ್ಫ್ಯೂ: ದಿನಸಿಗಾಗಿ ಮುಗಿಬಿದ್ದ ಜನ
ನಾಳೆಯಿಂದ ಮೇ 12 ರವರೆಗೆ ಜನತಾ ಕರ್ಫ್ಯೂ: ದಿನಸಿಗಾಗಿ ಮುಗಿಬಿದ್ದ ಜನನಾಳೆಯಿಂದ ಮೇ 12 ರವರೆಗೆ ಜನತಾ ಕರ್ಫ್ಯೂ: ದಿನಸಿಗಾಗಿ ಮುಗಿಬಿದ್ದ ಜನ

By

Published : Apr 27, 2021, 7:01 PM IST

ಬಾಗಲಕೋಟೆ: ಇಂದಿನಿಂದ ಜನತಾ ಕರ್ಫ್ಯೂ ಆರಂಭವಾದ ಹಿನ್ನೆಲೆ, ನಗರದಲ್ಲಿ ವಿವಿಧ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು.

ಬಾಗಲಕೋಟೆಯ ಬಸವೇಶ್ವರ ವೃತ್ತ, ವಲ್ಲಭಭಾಯಿ ಚೌಕ, ತರಕಾರಿ ಮಾರುಕಟ್ಟೆ, ಸರಾಫ್ ಬಜಾರ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಗ್ರಾಮೀಣ ಭಾಗದ ಜನತೆ ಹಾಗೂ ನಗರ ಪ್ರದೇಶದ ಜನತೆ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದರು. ತರಕಾರಿ ಸೇರಿದಂತೆ ಕಿರಾಣಿ ಅಂಗಡಿಗಳತ್ತ ಧಾವಿಸಿ ದಿನಸಿ ವಸ್ತುಗಳ ಖರೀದಿಸಿದರು.

ನಾಳೆಯಿಂದ ಮೇ 12 ರವರೆಗೆ ಜನತಾ ಕರ್ಫ್ಯೂ: ದಿನಸಿಗಾಗಿ ಮುಗಿಬಿದ್ದ ಜನ

ಮೇ 12 ರವರೆಗೆ ಜನತಾ ಕರ್ಫ್ಯೂ ಇರುವುದರಿಂದ ಮತ್ತೆ ದಿನಸಿ ಸಿಗುತ್ತದೆಯೋ ಇಲ್ಲವೊ ಎಂಬ ಆತಂಕದಿಂದ‌ ಜನ ಖರೀದಿಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ದು ಸರ್ಕಾರದ ಆದೇಶಕ್ಕೆ ಕಿಮ್ಮತ್ತು‌ ಇಲ್ಲದಂತಾಗಿದೆ. ಈ ಮಧ್ಯೆ ನವನಗರ ಹಾಗೂ ಬಾಗಲಕೋಟೆ ನಗರದಲ್ಲಿ ಪ್ರತಿ ನಿತ್ಯ 100 ರಿಂದ 200 ಕೊರೊನಾ ಕೇಸ್ ಬರುತ್ತಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆ ನಾಳೆಯಿಂದ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿ ಮಾಡಲು ನಿರ್ಧಾರ ಮಾಡಿದೆ.

ABOUT THE AUTHOR

...view details