ಬಾಗಲಕೋಟೆ:ಕೊರೊನಾ ಜನತಾ ಕರ್ಫ್ಯೂ ಹಿನ್ನೆಲೆ ಜಿಲ್ಲೆಯಲ್ಲಿರುವ ಸಾವಜಿ ಹೋಟೆಲ್ ನಡೆಸಿ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ಜನತಾ ಕರ್ಫ್ಯೂ: ಸಾವಜಿ ಹೋಟೆಲ್ ನಂಬಿ ಜೀವನ ನಡೆಸೋರ ಪರದಾಟ
ಉತ್ತರ ಕರ್ನಾಟಕ ಭಾಗದಲ್ಲಿ ಸಾವಜಿ ಹೋಟೆಲ್ ಎಂದರೆ ಬಲು ಫೇಮಸ್. ಆದರೆ, ಕೊರೊನಾದಿಂದ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿಗೆ ತಂದ ಹಿನ್ನೆಲೆ ಸಾವಜಿ ಹೋಟೆಲ್ ನಂಬಿ ಜೀವನ ನಡೆಸುತ್ತಿದ್ದವರಿಗೆ ಸಂಕಷ್ಟ ಎದುರಾಗಿದೆ.
ರುಚಿಕರ ಹಾಗೂ ಗುಣಮಟ್ಟದ ಮಾಂಸಹಾರ ಊಟ ಬಡಿಸುವ ಸಾವಜಿ ಹೋಟೆಲ್ನಲ್ಲಿ ಊಟ ಮಾಡುವುದೇ ಹಿತಕರವಾಗಿರುತ್ತದೆ. ಜನತಾ ಕರ್ಫ್ಯೂ ಹಿನ್ನೆಲೆ ಕಳೆದ ಒಂದು ವಾರದಿಂದ ಹೋಟೆಲ್ ಬಂದ್ ಮಾಡಲಾಗಿದೆ. ನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಿದ್ದ ಸಾವಜಿ ಹೋಟೆಲ್ ಕುಟುಂಬದವರು ಈಗ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರ್ಕಾರದ ಆದೇಶದ ಪ್ರಕಾರ ಮುಂಜಾನೆ 6 ರಿಂದ 10 ಗಂಟೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಇದೆ.
ಆದರೆ, ಸಾವಜಿ ಹೋಟೆಲ್ಗಳು ತೆರೆಯುವುದೇ ಮಧ್ಯಾಹ್ನದ ನಂತರ ಆಗಿರುವುದರಿಂದ ಬೆಳಗ್ಗೆ ಯಾರೂ ಪಾರ್ಸಲ್ ತೆಗೆದುಕೊಂಡು ಹೋಗುವುದಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಮಾತ್ರ ಸಾವಜಿ ಹೋಟೆಲ್ಗಳಿಗೆ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ, ಈಗ ಗುಂಪು ಸೇರುವಂತಿಲ್ಲ, ಮೋಜು ಮಸ್ತಿಗೆ ಕಡಿವಾಣ ಬಿದ್ದಾಗ ಪಾರ್ಸಲ್ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ಸಾವಜಿ ಹೋಟೆಲ್ ನಡೆಸುತ್ತಿದ್ದವರ ಸಂಕಷ್ಟ ಹೇಳತೀರದಾಗಿದೆ. ಹೀಗೆ ಕೊರೊನಾ ಕರ್ಫ್ಯೂ ಮುಂದುವರಿದರೆ ಜೀವನ ನಡೆಸುವುದು ಕಷ್ಟ ಎಂದು ಸಾವಜಿ ಹೋಟೆಲ್ ನಡೆಸುವವರು ಅಳಲು ತೋಡಿಕೊಂಡಿದ್ದಾರೆ.