ಕರ್ನಾಟಕ

karnataka

ETV Bharat / state

ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ವಿನಯ ತಿಮ್ಮಾಪುರ - Irregularities in state and district youth congress election

ಐವೈಸಿ ಚುನಾವಣೆ ಆಯೋಗವು ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಮಾಡಿದ್ದು, ಕೆಲವು ಬ್ಲಾಕ್ ಫಲಿತಾಂಶ ಮರು ಪರಿಶೀಲನೆ ಮಾಡಿ ಪ್ರಕಟಿಸಿದ್ದಾರೆ. ಆ್ಯಪ್‍ನಲ್ಲಿ 1 ಸಾವಿರ ಮತದಾರರನ್ನು ಮತದಾನದಿಂದ ತಿರಸ್ಕಾರ ಮಾಡಲಾಗಿದೆ. ಇದರಿಂದ ಫಲಿತಾಂಶದಲ್ಲಿ ಬಹಳ ಗೊಂದಲ ಉಂಟಾಗಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ ಹೇಳಿದ್ದಾರೆ.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ

By

Published : Feb 5, 2021, 10:01 PM IST

ಬಾಗಲಕೋಟೆ:ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಎಐಸಿಸಿ ಕೂಡಲೇ ಈ ಚುನಾವಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಎಲ್ಲ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ ಎಚ್ಚರಿಕೆ ನೀಡಿದರು.

ನಗರದ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಚುನಾವಣೆ ನಿಗದಿ ಪಡಿಸಲಾಗಿತ್ತು. ಐವೈಸಿ ಆ್ಯಪ್ ಸರಿಯಾಗಿ ಕಾರ್ಯ ನಿರ್ವಹಿಸದ ಪರಿಣಾಮ ಅನೇಕ ಜನ ಸದಸ್ಯರು ಮತದಾನದಿಂದ ವಂಚಿತರಾದರು. ತಾಂತ್ರಿಕ ಸಮಸ್ಯೆ ಉಂಟಾಗಿ ಅನೇಕ ಕಡೆ ಮತದಾನ ಆಗಲಿಲ್ಲ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ದೂರಿದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ

ಐವೈಸಿ ಚುನಾವಣೆ ಆಯೋಗವು ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಮಾಡಿದ್ದು, ಕೆಲವು ಬ್ಲಾಕ್ ಫಲಿತಾಂಶ ಮರು ಪರಿಶೀಲನೆ ಮಾಡಿ ಪ್ರಕಟಿಸಿದ್ದಾರೆ. ಆ್ಯಪ್‍ನಲ್ಲಿ 1 ಸಾವಿರ ಮತದಾರರನ್ನು ಮತದಾನದಿಂದ ತಿರಸ್ಕಾರ ಮಾಡಲಾಗಿದೆ. ಇದರಿಂದ ಫಲಿತಾಂಶದಲ್ಲಿ ಬಹಳ ಗೊಂದಲ ಉಂಟಾಗಿರುವುದು ಖಂಡನೀಯ. ಇನ್ನು ಚುನಾವಣೆಯಲ್ಲಿ ಒಟಿಪಿ ಮುಖಾಂತರ ಮಾಡಿದ ಮತದಾನ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಬೇರೆ ಪಕ್ಷಗಳ ಸದಸ್ಯರನ್ನು ಬಳಕೆ ಮಾಡಿಕೊಂಡು ಕೆಲವರು ಅನೈತಿಕ ಚುನಾವಣೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಓದಿ:ಪಕ್ಷ ವಿರೋಧಿ ಚಟುವಟಿಕೆ, ಬಿಜೆಪಿ ಮುಖಂಡ ಸಂತೋಷ ಹೊಕ್ರಾಣಿ ಉಚ್ಚಾಟನೆ

ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಈ ಫಲಿತಾಂಶ ಒಪ್ಪಲು ಸಾಧ್ಯವಿಲ್ಲ. ಈ ಚುನಾವಣೆ ಫಲಿತಾಂಶ, ಪ್ರಕ್ರಿಯೆ ಸಂಪೂರ್ಣ ರದ್ದು ಪಡಿಸಬೇಕು. ಬ್ಯಾಲೆಟ್ ಪೇಪರ್ ಮೂಲಕ ಮರುಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಎಲ್ಲರೂ ರಾಜೀನಾಮೆ ನೀಡಲಿದ್ದೇವೆ ಎಂದರು.

ABOUT THE AUTHOR

...view details