ಬಾಗಲಕೋಟೆ:ಪಟ್ಟಣ ಪ್ರಾಧಿಕಾರ ವತಿಯಿಂದ ಆರು ವರ್ಷಗಳ ಹಿಂದೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ನಿವೇಶನ ಪಡೆದುಕೊಂಡವರ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ಎಚ್ಚರಿಸಿದ್ದಾರೆ.
ಅಕ್ರಮ ನಿವೇಶನ ಪಡೆದುಕೊಂಡವರ ಬಗ್ಗೆ ತನಿಖೆ : ಶಾಸಕ ವೀರಣ್ಣ ಚರಂತಿಮಠ ಎಚ್ಚರ - ಬಾಗಲಕೋಟೆ ಪಟ್ಟಣ ಪ್ರಾಧಿಕಾರ
ಹಿಂದಿನ ಸರ್ಕಾರದ ಆಡಳಿತದಲ್ಲಿ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ನಿವೇಶನ ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ, ನೇರ ಅಧಿಕಾರಿಗಳ ಹತ್ತಿರ ನಿಮ್ಮ ಕೆಲಸ ಮಾಡಿಸಿಕೊಳ್ಳಿ..
ಪಟ್ಟಣ ಪ್ರಾಧಿಕಾರದ ನೂತನ ಸಭಾಂಗಣದಲ್ಲಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡಿದರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆಡಳಿತದಲ್ಲಿ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ನಿವೇಶನ ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ, ನೇರ ಅಧಿಕಾರಿಗಳ ಹತ್ತಿರ ನಿಮ್ಮ ಕೆಲಸ ಮಾಡಿಸಿಕೊಳ್ಳಿ.
ಸೂಕ್ತ ದಾಖಲೆ ನೀಡಿದರೆ ನಿವೇಶನ ನೀಡಲಾಗುವುದು. ಕಳೆದ ಒಂದೂವರೆ ತಿಂಗಳಲ್ಲಿ ಒಟ್ಟು 325 ಕುಟುಂಬದವರಿಗೆ ನಿವೇಶನ ನೀಡಲಾಗಿದೆ ಎಂದರು. ಇದೇ ವೇಳೆ 117 ಬಾಡಿಗೆದಾರರು, ಬಯಲು ಜಾಗೆ ಹೊಂದಿದ 15 ಜನರ, 11 ಮುಖ್ಯ ಸಂತ್ರಸ್ತರು, 5 ಅತಿಕ್ರಮಣದಾರರು ಹಾಗೂ 3 ವಾಣಿಜ್ಯ ಮಳಿಗೆದಾರರು ಸೇರಿ ಒಟ್ಟು 160 ಜನರಿಗೆ ಶಾಸಕರು ಹಕ್ಕು ಪತ್ರ ವಿತರಣೆ ಮಾಡಿದರು.