ಕರ್ನಾಟಕ

karnataka

ETV Bharat / state

ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅಪಮಾನ: ಕುರುಬ ಸಮುದಾಯದ ಪ್ರತಿಭಟನೆ - Bagalkote Protest news

ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅಪಮಾನ ಮಾಡಿದ ಹಿನ್ನೆಲೆ ಕುರುಬ ಸಮುದಾಯದವರಿಂದ ಪ್ರತಿಭಟನೆ ನಡೆಸಲಾಯಿತು.

Protest by kuruba community
ಕುರುಬ ಸಮುದಾಯದವರಿಂದ ಪ್ರತಿಭಟನೆ

By

Published : Oct 3, 2020, 8:26 PM IST

ಬಾಗಲಕೋಟೆ: ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅಪಮಾನ ಮಾಡಿದ ಹಿನ್ನೆಲೆ ಕುರುಬ ಸಮುದಾಯದವರಿಂದ ನವನಗರದ ಕಾಳಿದಾಸ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹನಮಂತ ಗಲಗಲಿ ಎಂಬ ಯುವಕ ಈ ಕೃತ್ಯವೆಸಗಿದ್ದು, ಈ ವ್ಯಕ್ತಿಯ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಕಳೆದ 21ರಂದು ರಾಯಣ್ಣನ ಭಾವಚಿತ್ರಕ್ಕೆ ಅಪಮಾನ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯ ವಿರುದ್ಧ ಕ್ರಮಕ್ಕೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮುದಾಯದವರಿಂದ ನವನಗರದ ಕಾಳಿದಾಸ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಮಾಜದ ಮುಖಂಡ ಬರ್ಮು ಪೂಜಾರ ನೇತೃತ್ವದಲ್ಲಿ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಮುಂದೆ ಭಾವಚಿತ್ರಕ್ಕೆ ಅಪಮಾನ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಸಮುದಾಯದ ವಿರುದ್ಧ ಯಾರೇ ಆಗಲಿ ಈ ರೀತಿಯಾಗಿ ವರ್ತನೆ ಮಾಡಿದಲ್ಲಿ ಕಠಿಣ ಶಿಕ್ಷೆ ಆಗಬೇಕು. ಅಂದಾಗ ಮಾತ್ರ ಇಂತಹ ಘಟನೆ ಮತ್ತೆ ಮರಕಳಿಸುವುದಿಲ್ಲ ಎಂದು ತಿಳಿಸಿದರು.

ಇನ್ನು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸಮುದಾಯದವರು, ಸಾಮಾಜಿಕ ಅಂತರ ಹಾಗೂ ಮಾಸ್ಕ್​ ಧರಿಸದೇ ಪ್ರತಿಭಟನೆ ನಡೆಸಿದ್ದು ಕಂಡು ಬಂತು.

ABOUT THE AUTHOR

...view details