ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಗ್ಯಾರಂಟಿ ಯೋಜನೆ ಪ್ರತಿ ಮನೆಗೂ ತಲುಪಿಸಲು ವಿನೂತನ ಪ್ಲಾನ್

ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ರಥ ಸಂಚರಿಸಲಿದೆ.

By

Published : May 23, 2023, 1:00 PM IST

Updated : May 23, 2023, 4:05 PM IST

Innovative plan to deliver Congress Guarantee Scheme to every home
ಕಾಂಗ್ರೆಸ್​ ಗ್ಯಾರಂಟಿ ಯೋಜನೆ ಪ್ರತಿ ಮನೆಗೂ ತಲುಪಲು ವಿನೂತನ ಯೋಜನೆ

ಕಾಂಗ್ರೆಸ್​ ಗ್ಯಾರಂಟಿ ಯೋಜನೆ ಪ್ರತಿ ಮನೆಗೂ ತಲುಪಲು ವಿನೂತನ ಯೋಜನೆ

ಬಾಗಲಕೋಟೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಜಿಕ್​ ನಂಬರ್​ಗಿಂತಲೂ ಅಧಿಕ ಸ್ಥಾನಗಳನ್ನು ಗೆದ್ದು ಕಾಂಗ್ರೆಸ್​ ಅಧಿಕಾರ ಗದ್ದುಗೆ ಏರಿದೆ. ತನ್ನ ಗೆಲುವಿಗೆ ತಾನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳೇ ಪ್ರಮುಖ ಕಾರಣ ಎನ್ನುವುದು ಕಾಂಗ್ರೆಸ್​ ನಂಬಿಕೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಜಾರಿಗೆ ತರುವ ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವಿನೂತ ಯೋಜನೆ ರೂಪಿಸಿಕೊಂಡು ಗಮನ ಸೆಳೆಯಲು ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಯನ್ನು ಪ್ರತಿ ಮನೆ ಮನೆಗೆ ತಲುಪಿಸುವುದು ಹಾಗೂ ಯೋಜನೆಯು ಸೂಕ್ತ ಪಲಾನುಭವಿಗಳಿಗೆ ಮುಟ್ಟಿರುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಸಜ್ಜಾಗಿದೆ.

ಮನೆ ಮನೆ ಸಂಚರಿಸಿ ಯೋಜನೆ ಲಾಭ ಪಡೆಯುವಂತೆ ಜಾಗೃತಿ.. ಸರ್ಕಾರ ಯೋಜನೆಯ ರೂಪುರೇಷೆನಗಳನ್ನು ಜಾರಿ ಮಾಡಿದ ತಕ್ಷಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮೂಲಕ, ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳ ಮೂಲಕ ಮನೆ ಮನೆಗೆ ಸಂಚಾರ ಮಾಡಿ, ಮಾಹಿತಿ ನೀಡುವ ಜೊತೆಗೆ ಯೋಜನೆಯನ್ನು ಸದೋಪಯೋಗ ಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದು ನಂತರ ಯೋಜನೆಯ ಬಳಕೆ ಆಗಿದೆಯೋ, ಇಲ್ಲವೋ ಎಂಬುದರ ಬಗ್ಗೆ, ಬಳಕೆ ಮಾಡದೆ ಇದ್ದಲ್ಲಿ ಯೋಜನೆಯನ್ನು ಬಳಸಿಕೊಳ್ಳುವಂತೆ ದಾಖಲೆ ಸಂಗ್ರಹಿಸಿ ಮುಟ್ಟಿಸುವಂತಹ ಕೆಲಸ ಕಾರ್ಯ ಮಾಡಲಾಗುವುದು.

ಇದಕ್ಕಾಗಿ ಸಮಿತಿ ರಚನೆ ಮಾಡಿ, ಜಿಲ್ಲಾ ಕೇಂದ್ರ, ತಾಲೂಕು ಮಟ್ಟ, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಸಂಚಾರ ಮಾಡುತ್ತಾರೆ. ಇದರ ಜೊತೆಗೆ ಯೋಜನೆ ಜಾಗೃತ ಸಲುವಾಗಿ ಕಾಂಗ್ರೆಸ್ ರಥ ಎಂದು ವಾಹನ ನಿರ್ಮಾಣ ಮಾಡಿ, ಇಡೀ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಸಂಚಾರ ಮಾಡಿ ಜನತೆಗೆ ಮಾಹಿತಿ ಮುಟ್ಟಿಸುವಂತಹ ಕೆಲಸ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ತಿಳಿಸಿದ್ದಾರೆ.

ಇದರ‌ ಜೊತೆಗೆ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಯ ಪ್ರತಿ ಮನೆಯ ಯಜಮಾನಿಗೆ 2,000 ರೂಪಾಯಿ ಮತ್ತು ಉಚಿತ ಬಸ್ ಪ್ರಯಾಣ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸಲು ಮಹಿಳಾ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲಿದ್ದಾರೆ. ಕಾಂಗ್ರೆಸ್ ಇಂತಹ ಯೋಜನೆ ಮಾಡಿರುವುದಕ್ಕೆ ಬಹುಮತದಿಂದ ಅಧಿಕಾರ ಹಿಡಿಯುವಂತಾಗಿದೆ. ಆದ್ದರಿಂದ ಈ ಯೋಜನೆಯ ಬಗ್ಗೆ ಜಾಗೃತಿ ಹಾಗೂ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಬಿಂಬಿಸಲು ಹೊಸ ಆಲೋಚನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಹುಮ್ಮಸ್ಸು ತುಂಬಲು ಪಕ್ಷವು ವಿನೂತನ ಯೋಚನೆ ಮಾಡಿಕೊಂಡು ಮುಂಬರುವ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಜನರು ವಿಶ್ವಾಸ ಬರುವ ನಿಟ್ಟಿನಲ್ಲಿ ಕೆಲಸ ಮಾಡಲು ಪಕ್ಷದ ಮುಖಂಡರು ಮುಂದಾಗಿದ್ದಾರೆ. ಸರ್ಕಾರ ಐದು ಗ್ಯಾರಂಟಿ ಯೋಜನೆ ಬಗ್ಗೆ ರೂಪುರೇಷೆ ಮಾಡಿದ ನಂತರ ಯಾವ ರೀತಿಯಾಗಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:ಉಚಿತ ವಿದ್ಯುತ್ ಗ್ಯಾರಂಟಿ ಮಧ್ಯೆ ಪ್ರಸಕ್ತ ಐದು ಎಸ್ಕಾಂಗಳ ಹಣಕಾಸು ಸ್ಥಿತಿಗತಿ ಹೇಗಿದೆ ನೋಡಿ!

Last Updated : May 23, 2023, 4:05 PM IST

ABOUT THE AUTHOR

...view details