ಕರ್ನಾಟಕ

karnataka

ETV Bharat / state

ಬಾಗಲಕೋಟೆ: ರೈತ ಉತ್ಪಾದಕ ಸಂಘಗಳ ಉತ್ತೇಜಕ ಕೇಂದ್ರಕ್ಕೆ ಚಾಲನೆ - Bagalokote latest news

ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಬಾರ್ಡ್ ಸಹಯೋಗದೊಂದಿಗೆ ರೈತ ಉತ್ಪಾದಕ ಸಂಘಗಳ ಉತ್ತೇಜಕ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಬಾಗಲಕೋಟೆ
ಬಾಗಲಕೋಟೆ

By

Published : Aug 1, 2020, 12:39 PM IST

ಬಾಗಲಕೋಟೆ:ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಬಾರ್ಡ್ ಸಹಯೋಗದೊಂದಿಗೆ ರೈತ ಉತ್ಪಾದಕ ಸಂಘಗಳ ಉತ್ತೇಜಕ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಕೇಂದ್ರದ ನಾಮಫಲಕಕ್ಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಇಂದಿರೇಶ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರಿಗೆ ರೈತ ಉತ್ಪಾದಕ ಸಂಘಗಳು ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಬಳಿಕ ವಿಸ್ತರಣಾ ನಿರ್ದೇಶಕ ಡಾ. ವೈ.ಕೆ.ಕೋಟಿಕಲ್ ಮಾತನಾಡಿ, ಈ ಕೇಂದ್ರದ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆರು ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ಮುಂಬರುವ ದಿನಗಳಿಗೆ ಮಾದರಿ ಸಂಘಗಳಾಗಿ ಬೆಳೆದು ನಿಲ್ಲಬೇಕೆಂದು ಹಾರೈಸಿದರು.

ನಂತರ ಯಮುನಾ ಪೈ ಮಾತನಾಡಿ, ರೈತ ಸಂಘಗಳು ತಮ್ಮ ಸ್ವ ಸಾಮರ್ಥ್ಯದ ಮೇಲೆ ಅಭಿವೃದ್ಧಿ ಹೊಂದಿ ರಾಷ್ಟ್ರದಲ್ಲಿಯೇ ಮಾದರಿ ಸಂಘಗಳಾಗಿ ರೂಪಗೊಳ್ಳಬೇಕೆಂದು ಹೇಳಿದರು.

ABOUT THE AUTHOR

...view details