ಕರ್ನಾಟಕ

karnataka

ETV Bharat / state

ಪೇದೆಯಿಂದ ಎಟಿಎಂ ಭದ್ರತಾ ಸಿಬ್ಬಂದಿಗೆ ಸೋಂಕು.... ಕ್ವಾರಂಟೈನ್ ನಲ್ಲಿ ಬ್ಯಾಂಕ್​ ಸಿಬ್ಬಂದಿ​​ - bagalakote latest news

ಪೇದೆಯಿಂದ ಎಟಿಎಂ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸದ್ಯ ಎಟಿಎಂನಿಂದ ಹಣ ಪಡೆದುಕೊಂಡವರಿಗೂ ಸಹ ಸೋಂಕು ತಾಗುವ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

Infection to ATM security guard to police
ಪೇದೆಯಿಂದ ಎಟಿಎಂ ಭದ್ರತಾ ಸಿಬ್ಬಂದಿಗೆ ಸೋಂಕು....ಬ್ಯಾಂಕ್​​ ಸಿಬ್ಬಂದಿಗೀಗ ಕ್ವಾರಂಟೈನ್​​

By

Published : Apr 21, 2020, 3:03 PM IST

ಬಾಗಲಕೋಟೆ: ಜಮಖಂಡಿ ನಗರದಲ್ಲಿನ ಎಸ್​​​ಬಿಐ ಎಟಿಎಂ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ಇರುವ ಹಿನ್ನಲೆ, ಬ್ಯಾಂಕ್ ಬಂದ್ ಮಾಡಿ ಬ್ಯಂಕ್​​​ನ ಎಲ್ಲಾ ಸಿಬ್ಬಂದಿಯನ್ನೂ ಕ್ವಾರಂಟೈನ್​​ನಲ್ಲಿಡಲಾಗಿದೆ.

26 ಸಿಬ್ಬಂದಿಯನ್ನು ಪ್ರತ್ಯೇಕ ಕ್ವಾರಂಟೈನ್​​ನಲ್ಲಿಡಲಾಗಿದ್ದು, ನೂರಾರು ಜನರಿಗೆ ಹೋಮ್ ಕ್ವಾರಂಟೈನ್​​ನಲ್ಲಿಡಲಾಗಿದೆ. ತಾತ್ಕಾಲಿಕವಾಗಿ ಬ್ಯಾಂಕ್ ಸೇವೆ ಸ್ಥಗಿತಗೊಂಡಿದ್ದು, ಹಣಕ್ಕಾಗಿ ಕೆಲ ಗ್ರಾಹಕರು ಪರದಾಡುವಂತಾಗಿದೆ. ಏ.13 ರಿಂದ ಏ.15 ರವರೆಗೆ ಎಟಿಎಂಗೆ ಭೇಟಿ ನೀಡಿರುವ ಗ್ರಾಹಕರ ಮಾಹಿತಿಯನ್ನು ತಾಲೂಕು ಆಡಳಿತ ಪತ್ತೆಹಚ್ಚಿ ನೂರಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ನಡೆಸಿದೆ.

ಪೇದೆಯಿಂದ ಎಟಿಎಂ ಭದ್ರತಾ ಸಿಬ್ಬಂದಿಗೆ ಸೋಂಕು....ಬ್ಯಾಂಕ್​​ ಸಿಬ್ಬಂದಿಗೀಗ ಕ್ವಾರಂಟೈನ್​​

ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಮಖಂಡಿ ಉಪವಿಭಾಗಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ. ಪೇದೆಯಿಂದ ಎಟಿಎಂ ಸಿಬ್ಬಂದಿಗೆ ಸೋಂಕು ಬಂದಿದ್ದು, ಸದ್ಯ ಎಟಿಎಂನಿಂದ ಹಣ ಪಡೆದುಕೊಂಡವರಿಗೂ ಸಹ ಸೋಂಕು ತಾಗುವ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

ABOUT THE AUTHOR

...view details