ಬಾಗಲಕೋಟೆ: ಹೈದ್ರಾಬಾದ್ನಲ್ಲಿ ಅತ್ಯಾಚಾರ ನಡೆಸಿದ ಆರೋಪಿಗಳ ಮೇಲೆ ಎನ್ಕೌಂಟರ್ ನಡೆಸಿರುವ ಪೊಲೀಸರ ಕಾರ್ಯವನ್ನು ಭಾರತೀಯ ಯುವ ಸಂಘಟನೆ ಶ್ಲಾಘಿಸಿದ್ದು, ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದೆ.
ಹೈದ್ರಾಬಾದ್ ಎನ್ಕೌಂಟರ್ಗೆ ಭಾರತೀಯ ಯುವ ಸಂಘಟನೆಯಿಂದ ಶ್ಲಾಘನೆ - Indian Youth Organization Appreciation for Hyderabad encounter update
ಹೈದ್ರಾಬಾದ್ನಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಮೆಚ್ಚಿ ಭಾರತೀಯ ಯುವ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಇಂಡಿಯನ್ ಯೂಥ್ ಸಂಘಟನೆಯಿಂದ ಪೊಲೀಸರಿಗೆ ರಾಖಿ ಕಟ್ಟಲಾಯಿತು.
ಬಾಗಲಕೋಟೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಭಾರತೀಯ ಯುವ ಸಂಘಟನೆಯ ಯುವಕ, ಯುವತಿಯರು ಸಿಬ್ಬಂದಿ ಕೈಗೆ ಸ್ನೇಹದ ದ್ಯೋತಕವಾಗಿ ರಕ್ಷೆ ಕಟ್ಟಿದರು. ಸಂಘಟನೆ ವತಿಯಿಂದ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿ, ಡಿಎಸ್ಪಿ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್ಕೌಂಟರ್ ಮಾಡುವ ಮೂಲಕ ಇಡೀ ದೇಶದಲ್ಲಿರುವ ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡಿದಂತಾಗಿದೆ ಎಂದು ವಿದ್ಯಾರ್ಥಿನಿ ಸಪ್ನಾ ರಾಥೋಡ ಈ ಸಂದರ್ಭದಲ್ಲಿ ತಿಳಿಸಿದರು.