ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಹೆಚ್ಚಾದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ... ಕಾರಣ ಇದು - Increasing number of coronavirus

ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್​ ಹರಡುವಿಕೆ ಹೆಚ್ಚಾಗತೊಡಗಿದೆಯೇ? ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಇದಕ್ಕೆ ಕಾರಣ ಏನು ಅನ್ನೋದನ್ನು ಸಹ ಅವರೇ ವಿವರಿಸಿದ್ದಾರೆ.

coronavirus
ಸಂಗ್ರಹ ಚಿತ್ರ

By

Published : Apr 20, 2020, 9:28 PM IST

ಬಾಗಲಕೋಟೆ: ಮಹಾಮಾರಿ ಕೊರೊನಾದಿಂದ ಮೃತಪಟ್ಟಿರುವ ವೃದ್ಧರ ಮನೆಯಲ್ಲಿ ಹಾಗೂ ಅಕ್ಕಪಕ್ಕದವರ ಮನೆಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಸುತ್ತಮುತ್ತ ಸ್ಥಳದಲ್ಲಿದ್ದ ಹಲವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರ ಮನೆಯ ಕೆಲ ಸದಸ್ಯರು ಸೇರಿದಂತೆ ಇತರರಿಗೆ ನೆಗೆಟಿವ್ ಬಂದಿದೆ.

ಆದರೆ, ನೆಗೆಟಿವ್ ಕಾಣಿಸಿಕೊಂಡ ವ್ಯಕ್ತಿಗಳಿಗೆ ಪಾಸಿಟಿವ್ ಇದ್ದವರ ಮನೆ ಅಕ್ಕಪಕ್ಕದಲ್ಲಿಯೇ ಸ್ಥಳ ಕಲ್ಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನೆಗೆಟಿವ್ ವರದಿ ಬಂದವರಿಗೆ ಕೆಲ ದಿನಗಳ ಕಾಲ ಬೇರೆಡೆ ಸ್ಥಳಾಂತರ ಮಾಡಿದರೆ ಒಳ್ಳೆಯದು.

ತಪಾಸಣೆಗೊಳಗಾಗಿ ಬಂದಿದ್ದರಿಂದ ಇವರನ್ನ ಅಸ್ಪೃಶ್ಯರಂತೆ ಕಾಣುವುದೇ ಹೆಚ್ಚು. ಪಾಸಿಟಿವ್ ಇದ್ದವರ ಮನೆ ಅಕ್ಕಪಕ್ಕದಲ್ಲಿಯೇ ನೆಗೆಟಿವ್ ವರದಿ ಬಂದವರಿಗೆ ಮತ್ತೆ ಅಲ್ಲಿಯೇ ಸ್ಥಳ ಕಲ್ಪಿಸಿಕೊಟ್ಟರೆ ಪುನಃ ಸೋಂಕು ಹರಡಬಹುದು. ಬೇರೆ ಕಡೆ ಸ್ಥಳ ಕಲ್ಪಿಸುವುದರಿಂದ ಮಾನಸಿಕವಾಗಿ ನೊಂದುಕೊಳ್ಳುವುದು ದೂರವಾಗುತ್ತೆ ಅನ್ನುವುದು ಸ್ಥಳೀಯರ ಮಾತು.

ಇನ್ನು ಬಾಗಲಕೋಟೆ ಮುಳಗಡೆ ಪ್ರದೇಶವಾಗಿರುವ ವಾರ್ಡ್​ ಸಂಖ್ಯೆ 5 ರಿಂದ 14 ರವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಇಲ್ಲಿನ ಸುಮಾರು ಐದು ಸಾವಿರ ಕುಟುಂಬಗಳಿಗೆ ಜಿಲ್ಲಾಡಳಿತ ವತಿಯಿಂದ ಆಹಾರ ಧಾನ್ಯ ನೀಡಲಾಗುತ್ತಿದೆ.

ಆದರೆ, ತರಕಾರಿ ಸರಿಯಾಗಿ ವಿತರಣೆ ಆಗುತ್ತಿಲ್ಲ. ಅಗತ್ಯ ವಸ್ತುಗಳಿಗೆ ಪರದಾಡುವಂತಾಗಿದೆ. ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಹೇಳದ ಸ್ಥಿತಿ ಇದೆ. 108 ಆ್ಯಂಬುಲೆನ್ಸ್ ವಾಹನ ಮೂಲಕ ಆಸ್ಪತ್ರೆಗೆ ಕಳಿಸಬೇಕು. ಅದಕ್ಕಾಗಿ ನಿಷೇಧ ಪ್ರದೇಶ ದಾಟಿ ಹೋಗುವುದು ಕಠಿಣವಾಗಿದೆ. ಸೋಂಕಿತ ಪ್ರದೇಶದಲ್ಲಿ ಔಷಧೀಯ ಸಿಂಪಡಣೆ ಮಾಡಲಾಗುತ್ತದೆ. ಆದರೆ, ಪಾಸಿಟಿವ್ ಬಂದವರ ಪ್ರದೇಶದಲ್ಲಿ ನೆಗೆಟಿವ್ ಬಂದವರನ್ನು ಮರಳಿ ಕಳಿಸುತ್ತಿರುವುದು ಸರಿಯಾದ ಕ್ರಮವಲ್ಲ ಎನ್ನುತ್ತಿದ್ದಾರೆ.

ABOUT THE AUTHOR

...view details