ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಬಾದಾಮಿ ತಾಲೂಕಿನ ಜಲಗೇರಿ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿ ಗ್ರಾಮಸ್ಥರು ಆತಂಕ ಪಡುವಂತಾಗಿದೆ.
ಮೈಬುಸಾಬ್ ಹುಲ್ಲಿಕೇರಿ ಎಂಬುವರ ಜಮೀನು 60 ಅಡಿ ಆಳ 40 ಅಡಿ ಅಗಲ ಬಾಯ್ತೆರೆದಿದೆ.ಭೂಮಿ ಬಾಯ್ತೆರೆದ ಹಿನ್ನೆಲೆ, ಮಾವಿನ ಮರ ಪಲ್ಟಿಯಾಗಿದ್ದು,ಅದನ್ನು ಸರಿಪಡಿಸುವಲ್ಲಿ ಜನರು ಪರದಾಡುವಂತಾಗಿದೆ.
ಜಲಗೇರಿ ಗ್ರಾಮದಲ್ಲಿ ಭಾರೀ ಭೂಕುಸಿತ ಕಳೆದ ವರ್ಷವೂ ಇದೇ ಜಾಗದ ಪಕ್ಕದಲ್ಲಿ ಭೂಕುಸಿತವಾಗಿತ್ತು. ಈಗ ಮತ್ತೆ ಭೂಮಿ ಕುಸಿತಗೊಂಡಿದ್ದು,ಮಳೆಯಿಂದಾಗಿ ಹೀಗೆ ಆಗಿದೆಯೋ? ಅಥವಾ ಮತ್ತೆ ಬೇರೆ ಏನಾದರೂ ಕಾರಣ ಇದೆಯಾ? ಎಂಬುದು ರೈತರ ಪ್ರಶ್ನೆಯಾಗಿದೆ.
ಈ ಬಗ್ಗೆ ತೋಟಗಾರಿಕೆ ವಿಶ್ವವಿದ್ಯಾಲಯ ವಿಜ್ಞಾನಿಗಳು ಅಥವಾ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಮಾಹಿತಿ ನೀಡಬೇಕಾಗಿದೆ ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.