ಬಾಗಲಕೋಟೆ: ಲಾಕ್ಡೌನ್ನಿಂದ ಉದ್ಯೋಗ ಇಲ್ಲದೆ ಕಂಗೆಟ್ಟಿದ್ದ ಜಿಲ್ಲೆಯ ಜನರ ಉಪಜೀವನಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ದಾರಿ ದೀಪವಾಗಿದೆ.
ಬಾಗಲಕೋಟೆ: ಜನರ ಉಪಜೀವನಕ್ಕೆ ದಾರಿಯಾದ ನರೇಗಾ - Bagalkot district news
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಕೊರೊನಾ ಪ್ರೇರಿತ ಲಾಕ್ಡೌನ್ನಲ್ಲಿ ದುಡಿಯುವ ಕೈಗಳ ಕೈ ಹಿಡಿದಿದೆ.
ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ 42 ಲಕ್ಷ ಉದ್ಯೋಗ ಗುರಿ ಹೊಂದಲಾಗಿದೆ. ಆದರೆ ಈವರೆಗೂ 33.6 ಲಕ್ಷ (ಶೇ. 78.73ರಷ್ಟು) ಉದ್ಯೋಗ ನೀಡಲಾಗಿದೆ. ಹಾಗೆಯೇ ವಾರ್ಷಿಕ ₹204 ಕೋಟಿ ಪೈಕಿ ₹116 ಕೋಟಿ ವೆಚ್ಚವಾಗಿದೆ. 2.13 ಲಕ್ಷ ಜನರಿಗೆ ಜಾಬ್ ಕಾರ್ಡ್ ನೀಡಲಾಗಿದೆ.
ಯೋಜನೆಯಡಿ ದಿನಕ್ಕೆ ₹275-285 ಕೂಲಿ ನೀಡಲಾಗುತ್ತಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಮನೆಯ ಮುಂದೆ ಇಂಗು ಗುಂಡಿ ತೆಗೆದರೆ ಮತ್ತು ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟರೂ ಈ ಯೋಜನೆಯಡಿ ಆದಾಯ ಬರುತ್ತದೆ.