ಬಾಗಲಕೋಟೆ:ಜಿಲ್ಲೆಯ ಜಮಖಂಡಿ ಪಟ್ಟಣದ ಬಳಿಯ ಜಂಬಗಿ ಸೇತುವೆಯಿಂದ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಜಮಖಂಡಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಆರೋಪ - Illegal sand shipping
ಜಂಬಗಿ ಸೇತುವೆಯಿಂದ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ.
ಮರಳು
ಜಮಖಂಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಇಟ್ಟಂಗಿ ಭಟ್ಟಿ ತಯಾರಿಸುವ ಕೇಂದ್ರಗಳಿವೆ. ಕೃಷ್ಣಾ ನದಿಯ ದಂಡೆ ಮೇಲಿರುವ ಕಪ್ಪು ಮಿಶ್ರಿತ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕಾರಿಗಳೇ ಶಾಮೀಲಾಗಿರುವ ಕಾರಣ ಈ ಕಾರ್ಯ ನಡೆಯುತ್ತಿದೆ. ಬೇಸಿಗೆ ಸಮಯದಲ್ಲಿ ನೀರು ಕಡಿಮೆಯಾದ ಬಳಿಕ ಪ್ರತಿ ವರ್ಷ ಹೀಗೆ ಅಕ್ರಮವಾಗಿ ಮಣ್ಣು ತೆಗೆದುಕೊಂಡು ಹೋಗಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.