ಕರ್ನಾಟಕ

karnataka

ETV Bharat / state

ಅಕ್ರಮ ಕೀಟನಾಶಕ ಮಾರಾಟ ಮಳಿಗೆ ಮೇಲೆ ಜಾಗೃತ ಕೋಶ ದಾಳಿ - bagalkote latest news

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಕ್ರಮ ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದು, 610 ಲೀಟರ್​ ನೈಟ್ರೋಬೆಂಜಿನ್​ ರಾಸಾಯನಿಕ ವಶಕ್ಕೆ ಪಡೆದಿದ್ದಾರೆ.

illegal fertilizer  in bagalkote
ಅಕ್ರಮ ಕೀಟನಾಶಕ ಮಾರಾಟ ಮಳಿಗೆ ಮೇಲೆ ಜಾಗೃತ ಕೋಶ ದಾಳಿ

By

Published : Sep 11, 2020, 9:37 PM IST

ಬಾಗಲಕೋಟೆ:ನೋಂದಾಣಿ ಮಾಡಿಸದ ಕೀಟನಾಶಕ ಮಳಿಗೆಗಳ ಮೇಲೆ ಜಿಲ್ಲೆಯ ಕೃಷಿ ಇಲಾಖೆಯ ಜಾಗೃತ ಕೋಶ ದಾಳಿ ನಡೆಸಿದೆ. ಹುನಗುಂದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಮಳಿಗೆ ಮೇಲೆ ದಾಳಿ ಮಾಡಲಾಗಿದ್ದು, 610 ಲೀಟರ್​ನಷ್ಟು ನೈಟ್ರೊಬೆಂಜಿನ್ ಎಂಬ ರಾಸಾಯನಿಕವನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಕೀಟನಾಶಕ ಮಾರಾಟ ಮಳಿಗೆ ಮೇಲೆ ಜಾಗೃತ ಕೋಶ ದಾಳಿ

ಅಕ್ರಮ ಕೃಷಿ ಪರಿಕರ ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆದ್ದರಿಂದ ರೈತರು ಖರೀದಿ ಮಾಡುವ ಮುನ್ನ ಬಾಟಲ್, ಪಾಕೇಟ್ ಮೇಲೆ ಲೇಬಲ್ ಪರಿಶೀಲಿಸಿ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಲು ಹಾಗೂ ಖರೀದಿಸಿದ ಪರಿಕರಕ್ಕೆ ಕಡ್ಡಾಯವಾಗಿ ಬಿಲ್​ಗಳನ್ನು ಪಡೆದುಕೊಳ್ಳುಲು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಯಾವುದೇ ಕಾರಣಕ್ಕೂ ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು, ಮಾರಾಟ ಮಾಡದಿರಲು ಜಂಟಿ ಕೃಷಿ ನಿರ್ದೇಶಕ ಡಾ.ಚೇತನಾ ಪಾಟೀಲ ತಿಳಿಸಿದರು.

ABOUT THE AUTHOR

...view details