ಕರ್ನಾಟಕ

karnataka

ETV Bharat / state

ಅಕ್ರಮ ಗೋವು ಸಾಗಾಟ.. ಇಬ್ಬರು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸಂಗ್ರಾಮ ಸೇನೆ.. - ಅಕ್ರಮ ಗೋವು ಸಾಗಾಟ

ಸಿಕ್ಕೇರಿ ಕ್ರಾಸಿನಲ್ಲಿ ಅಕ್ರಮವಾಗಿ ಗೋವುಗಳ ಸಾಗಾಣೆ ಮಾಡುತ್ತಿದ್ದ ಲಾರಿ ಮೇಲೆ ಸಂಗ್ರಾಮ ಸೇನೆ ಸಂಘಟನೆಯವರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

Illegal cow shipping, ಅಕ್ರಮ ಗೋವು ಸಾಗಾಟ

By

Published : Nov 16, 2019, 6:17 PM IST

ಬಾಗಲಕೋಟೆ:ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ಲಾರಿ ಮೇಲೆ ಸಂಗ್ರಾಮ ಸೇನೆ ಸಂಘಟನೆಯವರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರಿಗೊಪ್ಪಿಸಿದ ಸಂಗ್ರಾಮ ಸೇನೆ..

ಬಾಗಲಕೋಟೆಯ ಸಿಕ್ಕೇರಿ ಕ್ರಾಸಿನಲ್ಲಿ ಅಕ್ರಮವಾಗಿ ಗೋವುಗಳ ಸಾಗಾಣೆ ಮಾಡುತ್ತಿದ್ದ ವಾಹನ ತಡೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸಂಗ್ರಾಮ ಸೇನೆ ಸಂಘಟನೆ ಮುಖಂಡರಾದ ಮಹಾಂತೇಶ್ ರಾಥೋಡ್, ಸಂಗಮೇಶ ಮಾದರ ಮತ್ತು ಚೆನ್ನಪ್ಪ ಮಾಚಕನೂರ ಸೇರಿ ಇತರರು ಲಾರಿಯಲ್ಲಿದ್ದ ಇಬ್ಬರು ಚಾಲಕರು ಸೇರಿದಂತೆ ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ABOUT THE AUTHOR

...view details