ಬಾಗಲಕೋಟೆ: ನಾನು ಮುಖ್ಯಮಂತ್ರಿ ಆಗಿದ್ದರೆ, ಕೊರೊನಾದಿಂದ ಸಂಕಷ್ಟದಲ್ಲಿರುವ ಬಡ ಜನತೆಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಕೆಂದೂರ ಗ್ರಾಮದಲ್ಲಿ ಪಂಚಾಯತ್ ಸೇರಿ ಇತರೆ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಜನರ ಬಳಿ ದುಡ್ಡಿಲ್ಲದೆ ತೆರಿಗೆ ಹೇಗೆ ಕಟ್ಟುವುದು, ಅಂಗಡಿಗೆ ಹೋಗಿ ಸಾಮಗ್ರಿ ಖರೀದಿಸಿದ ನಂತರವೇ ತೆರಿಗೆ ವಸೂಲಿ ಆಗುವುದು ಅಲ್ವಾ? ಎಂದು ಪ್ರಶ್ನಿಸಿದರು.ಸಾರಾಯಿ ಅಂಗಡಿ ತೆರೆದು ಸರ್ಕಾರ ದುಡ್ಡು ಮಾಡಲು ಮುಂದಾಯಿತು. ಇಂಥ ಸಂದರ್ಭದಲ್ಲಿ ಮಹಿಳೆಯರೇ ಸಾಲಾಗಿ ನಿಂತು ಮದ್ಯ ಖರೀದಿಸಿದರು ಎಂದು ನಗೆ ಚಟಾಕಿ ಹಾರಿಸಿದರು.