ಬಾಗಲಕೋಟೆ:ವೆಂಟಿಲೇಟರ್ ಹಾಗೂ ಇತರೆ ದಾಸ್ತಾನು ಖರೀದಿಯಲ್ಲಿ ಸರ್ಕಾರ ಅವ್ಯವಹಾರ ಮಾಡಿಲ್ಲ ಅಂದ್ರೆ ಶ್ವೇತ ಪತ್ರ ಹೊರಡಿಸಲಿ. ಇಲ್ಲವೇ ನ್ಯಾಯಾಂಗ ತನಿಖೆ ಮಾಡಲಿ, ಏನು ತಪ್ಪು ಮಾಡಿಲ್ಲ ಅಂದರೆ ತನಿಖೆಗೆ ಸರ್ಕಾರ ಭಯ ಪಡುವುದು ಏಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ಸರ್ಕಾರ ಭ್ರಷ್ಟಾಚಾರ ನಡೆಸಿಲ್ಲ ಎಂದರೇ ಶ್ವೇತಪತ್ರ ಹೊರಡಿಸಲಿ: ಈಶ್ವರ ಖಂಡ್ರೆ - Shwetha patra
ಮಾಸ್ಕ್, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ ಸೇರಿದಂತೆ ಇತರ ಖರೀದಿಯಲ್ಲಿ ಸರ್ಕಾರ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಒಂದು ವೇಳೆ ನಡೆಸಿಲ್ಲ ಎಂದಾದರೇ ಶ್ವೇತಪತ್ರ ಹೊರಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಬಾಗಲಕೋಟೆ ನವನಗರದ ಅಕ್ಷಯ ಹೋಟೆಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಸ್ಕ್, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ ಸೇರಿದಂತೆ ಇತರ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. 4.5 ಲಕ್ಷ ದರ ಇರುವ ವೆಂಟಿಲೇಟರ್ನನ್ನು 18 ಲಕ್ಷಕ್ಕೂ ಹೆಚ್ಚು ದರ ನೀಡಿ ಖರೀದಿಸಿದ್ದಾರೆ. ಇದರಲ್ಲಿ 13 ಲಕ್ಷ ಅವ್ಯವಹಾರ ಆಗಿದೆ. ಜನ ಸಾಮಾನ್ಯರ ಹಣ ಲೂಟಿ ಮಾಡುತ್ತಿರುವ ಸರ್ಕಾರ ಲೆಕ್ಕಕೊಡಿ ಅಂದರೆ ನೋಟಿಸ್ ನೀಡುತ್ತಾರೆ ಎಂದು ಲೇವಡಿ ಮಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಶೀಲಾನ್ಯಾಸಕ್ಕೆ ನಮ್ಮ ಬೆಂಬಲ ಇದೆ. ರಾಮ ಅಂದರೆ ಒಂದು ಜಾತಿಗೆ, ಪಕ್ಷಕ್ಕೆ ಸೀಮಿತವಲ್ಲ ಇಡೀ ದೇಶಕ್ಕೆ ಮಹಾಪುರುಷ ಎಂದು ಬಣ್ಣಿಸಿದರು. ಈ ಸಮಯದಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪೂರ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕರಾದ ಎಚ್ ವೈ ಮೇಟಿ, ಜೆ.ಟಿ.ಪಾಟೀಲ,ಅಜೇಯಕುಮಾರ ಸರನಾಯಕ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.