ಬಾಗಲಕೋಟೆ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹಾಲಿಂಗಪೂರದ ನಿವಾಸಿ ಇಬ್ರಾಹಿಂ ಸುತಾರರಿಗೆ ಬೆಳಗ್ಗೆ 6:30ಕ್ಕೆ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದಿದ್ದರೂ ಸಹ ಗುಣಮುಖವಾಗಿರಲಿಲ್ಲ.
ಪದ್ಮಶ್ರೀ ಪುರಸ್ಕೃತರು ಇಬ್ರಾಹಿಂ ಸುತಾರ ಇನ್ನಿಲ್ಲ ಓದಿ:ಸ್ಪುಟ್ನಿಕ್ ಲೈಟ್ ಒನ್ ಶಾಟ್ ಲಸಿಕೆಗೆ ಅನುಮೋದನೆ ನೀಡಿದ ಡ್ರಗ್ ರೆಗ್ಯುಲೇಟಿಂಗ್ನ ವಿಷಯ ತಜ್ಞರ ಸಮಿತಿ
ಇಂದು ಬೆಳಗ್ಗೆ ಮತ್ತೇ ಲಘು ಹೃದಯಾಘಾತ ಆದ ಹಿನ್ನೆಲೆ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಪದ್ಮಶ್ರೀ ಪುರಸ್ಕೃತರು ಇಬ್ರಾಹಿಂ ಸುತಾರ ಕುಟುಂಬ ಇನ್ನು ಇಬ್ರಾಹಿಂ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದ ಇಬ್ರಾಹಿಂ ಸುತಾರ್ ಅವರು, ಹಿಂದೂ-ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚಕರಾಗಿದ್ದರು. ಸೂಫಿ ಸಂತರಾಗಿದ್ದ ಸುತಾರ್ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.
ಪದ್ಮಶ್ರೀ ಪುರಸ್ಕೃತರು ಇಬ್ರಾಹಿಂ ಸುತಾರ ಓದಿ:ಇಂದು 'ಸಮಾನತೆಯ ಪ್ರತಿಮೆ' ಉದ್ಘಾಟಿಸಲಿರುವ ಪಿಎಂ.. ಹೈದರಾಬಾದ್ನಲ್ಲಿ ಮೋದಿ ಪರ್ಯಟನೆ ಹೀಗೆ ಸಾಗಲಿದೆ..
ಇತ್ತೀಚಿಗೆ ರಾಷ್ಟ್ರದ ಶ್ರೇಷ್ಟ ಪ್ರಶಸ್ತಿ ಯಾಗಿರುವ ಪದ್ಮಶ್ರೀ ಯನ್ನು ರಾಷ್ಟ್ರಪತಿ ಅವರಿಂದ ಪಡೆದುಕೊಂಡಿದ್ದರು. ಇವರ ಮನೆಯಲ್ಲಿ ಪ್ರವಚನ ಪುಸ್ತಕಗಳು ಹಾಗೂ ಪ್ರಶಸ್ತಿಗಳು ಎಲ್ಲೆಡೆ ಕಾಣುತ್ತವೆ. ಅವರ ಮನೆಗೆ ಭಾವೈಕ್ಯ ಎಂದು ಹೆಸರಿಟ್ಟು ಸದಾ ಭಾವೈಕ್ಯತೆಯನ್ನೇ ಸಾರುತ್ತಿದ್ದರು.