ಕರ್ನಾಟಕ

karnataka

ETV Bharat / state

ಬಾದಾಮಿ: ಕೊಲೆಯಲ್ಲಿ ಅಂತ್ಯವಾಯ್ತು ಗಂಡ ಹೆಂಡತಿ ಜಗಳ - bhagalkot Husband and wife quarell

ಪದೇ ಪದೆ ಕುಡಿದು ಬಂದು ಜಗಳ ತೆಗೆಯುತ್ತಿದ್ದ ಪತಿ‌‌ಯಿಂದ ಬೇಸತ್ತು ಪತ್ನಿ ತಿರುಗಿಬಿದ್ದಿದ್ದಾಳೆ. ಆದ್ರೆ, ಸಿಟ್ಟಿನಿಂದ ಜಗಳವನ್ನು ಜೋರು ಮಾಡಿದ ಆಕೆಯ ಪ್ರಾಣವನ್ನೇ ತೆಗೆದಿದ್ದಾನೆ ಪಾಪಿ ಪತಿ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

wife-quarell
ಕೌಟುಂಬಿಕ‌ ಕಲಹ

By

Published : Nov 20, 2020, 10:26 AM IST

ಬಾಗಲಕೋಟೆ: ಗಂಡ -ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾದಾಮಿ ತಾಲೂಕಿನ ನರೆನೂರು ಗ್ರಾಮದಲ್ಲಿ ಜರುಗಿದೆ.

ನರೆನೂರು ಗ್ರಾಮದ, ಯಲ್ಲವ್ವ ಪೂಜಾರ(24) ಕೊಲೆಯಾದ ಮಹಿಳೆ. ಈಕೆಯ ಪತಿ ರಮೇಶ್ ಪೂಜಾರ(26)ಕೊಲೆ ಮಾಡಿರುವ ಆರೋಪಿ. ಗುರುವಾರ ರಾತ್ರಿ ಘಟನೆ ನಡೆದಿದೆ.

ಪ್ರತಿದಿನ ಕುಡಿದು ಬಂದು ಜಗಳ ತೆಗೆಯುತ್ತಿದ್ದ ಪತಿ‌‌ಯಿಂದ ಬೇಸತ್ತ ಪತ್ನಿ ನಿನ್ನೆ ಗಂಡನ ವಿರುದ್ಧ ತಿರುಗಿಬಿದ್ದಿದ್ದಾಳೆ. ಈ ವೇಳೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ABOUT THE AUTHOR

...view details