ಕರ್ನಾಟಕ

karnataka

ETV Bharat / state

ನಿರಂತರ ಮಳೆಯಿಂದಾಗಿ ಮೈದುಂಬಿದ ಹುಲಿಗೆಮ್ಮ ಕೊಳ್ಳದ ಫಾಲ್ಸ್.. ವಿಡಿಯೋ

ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗಿದ್ದು, ಹುಲಿಗೆಮ್ಮ ಕೊಳ್ಳದ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಇದನ್ನು ನೋಡಲು ಹೆಚ್ಚನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

Kn_Bgk_01
ಹುಲಿಗೆಮ್ಮ ಕೊಳ್ಳದ ಫಾಲ್ಸ್​

By

Published : Oct 11, 2022, 8:50 PM IST

ಬಾಗಲಕೋಟೆ: ಬಾದಾಮಿ ತಾಲೂಕಿನಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆ ಹುಲಿಗೆಮ್ಮ ಕೊಳ್ಳದ ಫಾಲ್ಸ್ ಮೈ ದುಂಬಿ ಹರಿಯುತ್ತಿದ್ದು, ಬೆಟ್ಟದ ಮೇಲಿಂದ ಅಪಾರ ಪ್ರಮಾಣದ ನೀರು‌ ಧುಮ್ಮಿಕ್ಕಿಬಿಳುತ್ತಿರುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೈದುಂಬಿದ ಹುಲಿಗೆಮ್ಮ ಕೊಳ್ಳದ ಫಾಲ್ಸ್

ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಆಗಿರುವ ಈ ಪ್ರದೇಶವು ಪ್ರಕೃತಿಯ ಸೌಂದರ್ಯದ ಮಧ್ಯೆ ಕಂಗೊಳಿಸುತ್ತದೆ. ಹುಲಿಗೆಮ್ಮ ದೇವಿಯ ದೇವಾಲಯ ಹಾಗೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಿರುವ ಚಿಕ್ಕ ಈಶ್ವರಲಿಂಗ ದೇವಾಲಯವೂ ಇಲ್ಲಿದ್ದು ಪ್ರತಿವರ್ಷ ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಚಾಲುಕ್ಯರು ಈ ಸ್ಥಳವನ್ನು ಖಜಾನೆ ಇಡುವ ಸ್ಥಳವನ್ನಾಗಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಇದು ಬಾದಾಮಿಯಿಂದ‌ 20 ಕಿಲೋ ಮೀಟರ್ ದೂರದಲ್ಲಿದ್ದು, ವಿವಿಧ ಊರುಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ನೀರಿನಲ್ಲಿ ಮಿಂದೆದ್ದು ಆನಂದಿಸುತ್ತಿದ್ದಾರೆ.

ಇದನ್ನೂ ಓದಿ:ಮಳೆಗಾಲದಲ್ಲಿ ಮೈದುಂಬುವ ಹನುಮಾನ್ ಲಾಠಿ.. ವೀಕೆಂಡ್​​ನಲ್ಲಿ ಫಾಲ್ಸ್ ತುಂಬ ಪ್ರವಾಸಿಗರ ದಂಡು!

ABOUT THE AUTHOR

...view details