ಬಾಗಲಕೋಟೆ:ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಬಾಗಲಕೋಟೆ ನಗರದಲ್ಲಿ ಬೃಹತ್ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಬಿಲ್ಡ್ ಟೆಕ್ -2019 ನಡೆಯಿತು.
ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭಕ್ಕೆ ಸಂಸದರಾದ ಪಿ ಸಿ ಗದ್ದಿಗೌಡರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವಂತಹ ಹಲವಾರು ಸಾಮಗ್ರಿಗಳು ಸಿಗುತ್ತದೆ. ಆದರೆ, ಗುಣಮಟ್ಟದ ಕಡಿಮೆ ಬೆಲೆಗೆ ದೂರಕುವಂತ ಸರಕುಗಳನ್ನು ಗ್ರಾಹಕರು ಖರೀದಿಸುತ್ತಾರೆ. ಗ್ರಾಹಕರಿಗೆ ಅನುಕೂಲಕರವಾದ ಇಂತಹ ಮೇಳವನ್ನು ಹಮ್ಮಿಕೊಳ್ಳುವುದು ಅಗತ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.