ಕರ್ನಾಟಕ

karnataka

ETV Bharat / state

ಊಟದ ಜೊತೆ ಪರಿಸರ ಪಾಠ, ಗ್ರಾಹಕರಿಗೆ ಗಿಡ ನೀಡುವ ಹೊಟೇಲ್! - Kannada news

ಹೊಟೇಲ್‌ಗೆ ಬರುವ ಗ್ರಾಹಕರಿಗೆ ಸಸಿ ನೀಡುವ ಮೂಲಕ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ಉಡುಗೂರೆ

By

Published : Jun 8, 2019, 9:45 PM IST

ಬಾಗಲಕೋಟೆ : ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುವುದು ಕಾಮನ್. ಆದ್ರೆ, ಇಲ್ಲೊಂದು ಹೊಟೇಲಿನಲ್ಲಿ ಗ್ರಾಹಕರಿಗೆ ಸಸಿ ನೀಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿ ಮರ ಬೆಳೆಸಿ ಹಸಿರು ಉಳಿಸಿ ಎಂಬ ಸಂದೇಶ ಸಾರಲಾಗುತ್ತಿದೆ.

ನಗರದ ವಿದ್ಯಾಗಿರಿ ಪ್ರದೇಶದ ಪಕವಾನ್ ಎಂಬ ಹೊಟೇಲ್ ಮಾಲೀಕ ಪವನ್ ಸೀಮೆಕೇರಿ, ಗ್ರಾಹಕರನ್ನು ಸೆಳೆಯುವ ಜೊತೆಗೆ ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ಉಡುಗೂರೆ

ಸಂಪೂರ್ಣ ಸಸ್ಯಹಾರಿ ಆಹಾರ ಒದಗಿಸುವ ಈ ಹೊಟೇಲ್, ಶುಚಿರುಚಿಗೆ ಹೆಸರುವಾಸಿಯಾಗಿದೆ. ವಿಶೇಷ ಅಂದ್ರೆ, ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ವಿತರಣೆ ಮಾಡುವ ಜೊತೆಗೆ, ಪಾರ್ಸಲ್ ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಹಾಗೂ ಆನ್‌ಲೈನ್ ಮೂಲಕ ಆಹಾರ ಬುಕ್ ಮಾಡಿದ ಗ್ರಾಹಕರಿಗೂ ಸಿಬ್ಬಂದಿ ಮೂಲಕ ಸಸಿಯನ್ನು ನೀಡುತ್ತಾರೆ.

ABOUT THE AUTHOR

...view details