ಬಾಗಲಕೋಟೆ: ಕೊರೊನಾದಿಂದ ಈಗಾಗಲೇ ಜನ ತತ್ತರಿಸಿದ್ದು, ಜಿಲ್ಲಾಡಳಿತ ಕೆಲ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹೊಳೆಬಸು ಶೆಟ್ಟರ್ ವಿನಂತಿಸಿಕೊಂಡಿದ್ದಾರೆ.
ಸೀಲ್ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಬೇಕು: ಹೊಳೆಬಸು ಶೆಟ್ಟರ್ ಒತ್ತಾಯ - Bhagalkot corona control measures
ಬಾಗಲಕೋಟೆ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದಿರುವ ಕೆಲ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹೊಳೆಬಸು ಶೆಟ್ಟರ್ ಆಗ್ರಹಿಸಿದ್ದಾರೆ.
ಕೊರೊನಾ ಪಾಸಿಟಿವ್ ಕೇಸ್ ಬಂದಾಗ ಅವರ ಮನೆ ಸುತ್ತಲಿನ 50 ಮೀಟರ್ ಪ್ರದೆಶವನ್ನು ಸೀಲ್ಡೌನ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಾಮಾನ್ಯ ಜನತೆ, ಬಡ ಕೂಲಿ ಕಾರ್ಮಿರಿಗೆ ಉದ್ಯೋಗವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಇನ್ನು ಸರ್ಕಾರದ ಆದೇಶದ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ ಮಾಡುವುದರಿಂದ ಎಲ್ಲರೂ ಒಂದೆಡೆಗೆ ಸೇರಿರುತ್ತಾರೆ. ಇದರಿಂದಾಗಿ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿವೆ. ಯಾರಿಗೆ ಪಾಸಿಟಿವ್ ಬರುತ್ತದೆಯೋ ಅವರ ಮನೆ ಅಷ್ಟೇ ಸೀಲ್ಡೌನ್ ಮಾಡಿ, ಅಕ್ಕಪಕ್ಕದ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಶೆಟ್ಟರ್ ವಿನಂತಿಸಿಕೊಂಡಿದ್ದಾರೆ.