ಬಾಗಲಕೋಟೆ : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಪುಟ್ಬಾಲ್ ತರಹ ಹೊಡೆದು ಹಾಕಿ ಕಲ್ಯಾಣ ರಾಜ್ಯ ಪ್ರಗತಿ (ಕೆಆರ್ಪಿಪಿ) ಪಕ್ಷಕ್ಕೆ ಬೆಂಬಲಿಸಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೆಡ್ಡಿ, ನಾನು ಹೆಲಿಕಾಪ್ಟರ್ ಚಿಹ್ನೆ ಕೇಳಿದ್ದೆ, ಆದರೆ ಕೊಡಲಿಲ್ಲ ಹಾಗಾಗಿ ಪುಟ್ಬಾಲ್ ಚಿಹ್ನೆ ಆಯ್ಕೆ ಮಾಡಿದ್ದೇನೆ. ಏಕೆಂದರೆ ನಾನು ಸಚಿವರಾಗಿದ್ದ ಸಮಯದಲ್ಲಿ ಬೆಂಗಳೂರಿಗೆ ಹೋಗುವುದಕ್ಕೆ ಹಾಗೂ ವಾಪಸ್ ಬರುವುದಕ್ಕೆ ಸಮಯ ಉಳಿತಾಯ ಆಗುತ್ತಿದ್ದು, ಕ್ಷೇತ್ರದ ಜನತೆ ಸಮಸ್ಯೆ ಆಲಿಸುವುದಕ್ಕೆ ಅನುಕೂಲವಾಗುತ್ತಿತ್ತು.
ಆದರೆ ಹೆಲಿಕಾಪ್ಟರ್ದಲ್ಲಿ ತಿರುಗಾಡಿರುವುದೇ ವಿಲನ್ ತರಹ ಬಿಂಬಿಸಿ, ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ. ಎಲ್ಲ ಪಕ್ಷದವರು ಒಗ್ಗಟ್ಟಾಗಿ ಸೇರಿಕೊಂಡು ಇನ್ನು ಬೆಳೆಯಲು ಬಿಡಬಾರದು ಎಂಬ ಉದ್ದೇಶದಿಂದ ಮೀನಿಗೆ ಗಾಳ ಹಾಕಿದಂತೆ ನನಗೆ ಗಾಳ ಹಾಕಿ ಬಳ್ಳಾರಿಯಿಂದ ನನ್ನನ್ನು ದೂರವಿಟ್ಟರು. ಇದೀಗ ಅವರನ್ನು ಪುಟ್ಬಾಲ್ ತರಹ ಆಡುವ ಅವಕಾಶ ನಮಗೆ ಸಿಕ್ಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ಧ ಗಾಲಿ ಜನಾರ್ದನ ರೆಡ್ಡಿ ಹರಿಹಾಯ್ದರು.
ಜನಾರ್ದನ ರೆಡ್ಡಿ ಇಲ್ಲದೆ ಸರ್ಕಾರ ರಚನೆ ಆಗಲ್ಲ : ಪಕ್ಷವನ್ನು ರಚನೆ ಮಾಡಿ ಕೇವಲ 3 ತಿಂಗಳ ಆಗಿದ್ದು, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಬೀದರ ಸೇರಿದಂತೆ ಇತರ ಕ್ಷೇತ್ರದಲ್ಲಿ ಕೇವಲ 20 ರಿಂದ 28 ಕ್ಷೇತ್ರದಲ್ಲಿ ಪಕ್ಷದ ಆಭ್ಯರ್ಥಿ ಆಯ್ಕೆಯಾದರೆ ಸಾಕು ಜನಾರ್ದನ ರೆಡ್ಡಿ ಇಲ್ಲದೆ ಸರ್ಕಾರ ರಚನೆ ಆಗಲ್ಲ ಎಂದು ಹೇಳಿದರು. ಈ ಭಾಗದಲ್ಲಿ ಪಕ್ಷದ ಸಂಘಟನೆ ಮಾಡಲು ನದೀಮ್ ಅವರು ಮುಂದೆ ಬಂದಿರುವುದು ಪಕ್ಷದಿಂದ ಸ್ವಾಗತವಾಗಿದೆ. ಇಡೀ ರಾಜ್ಯದಲ್ಲಿಯೇ ಬಳ್ಳಾರಿಯಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಒಂದಾಗಿ ಇದ್ದಾರೆ. ಆದರೆ ಕೆಲವರು ರಾಜಕಾರಣಕ್ಕಾಗಿ ಜಾತಿ ವೈಷಮ್ಯ ಮೂಡಿಸುತ್ತಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾನೇ ಕಾರಣ : ಒಬ್ಬ ರಾಜಕಾರಣಿ ಎಷ್ಟು ವರ್ಷ ಬದುಕುತ್ತಾನೆ ಎಂಬುದು ಗೊತ್ತಿಲ್ಲ. ಆದರೆ ಇರುವಷ್ಟು ದಿನ ಸಮಾಜದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ಇದರಿಂದ ದ್ವೇಷದ ರಾಜಕಾರಣಿ ಮಾಡುವ ಯಾವುದೇ ಪಕ್ಷ ರಾಜ್ಯದಲ್ಲಿ ಉಳಿಯುವುದಿಲ್ಲ ಎಂದರು. ಪೊಲೀಸ್ ಮಗನಾಗಿ ಹುಟ್ಟಿ ಇಡೀ ರಾಜ್ಯದಲ್ಲಿ ಟೀಕೆ ಟಿಪ್ಪಣಿ ಮಾಡಿದರೂ ಸಹ ಕೆಆರ್ಪಿಪಿ ಪಕ್ಷಕ್ಕ ಮತ್ತು ನನಗೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಗೆಳೆಯ ಶ್ರೀರಾಮಲುಗೋಸ್ಕರ ರಾಜಕೀಯ ಕ್ಕೆ ನಾನು ಬಂದಿದ್ದೇನೆ. ಸೋನಿಯಾ ಗಾಂಧಿ ವಿರುದ್ಧ ತಾಯಿ ಸುಷ್ಮಾ ಸ್ವರಾಜ ಸ್ಪರ್ಧೆ ಮಾಡಲು ಬಂದಾಗ ನಾನು ಅವರಿಗೆ ಸಾಕಷ್ಟು ಕೆಲಸ ಮಾಡಿದೆ. ಯಡಿಯೂರಪ್ಪ ನವರು ಮುಖ್ಯಮಂತ್ರಿ ಮಾಡಿದ್ದು, ಜನಾರ್ದನ ರೆಡ್ಡಿ ಎಂದು ಜನರು ಮಾತನಾಡುವಂತೆ ಮಾಡಿದ್ದೇನೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾನೇ ಕಾರಣ ಎಂದು ರೆಡ್ಡಿ ತಿಳಿಸಿದರು.