ಕರ್ನಾಟಕ

karnataka

ETV Bharat / state

ದೇಶದಲ್ಲಿ ಹಿಂದುಗಳು‌ ಜನಸಂಖ್ಯೆ ನಿಯಂತ್ರಣ ಮಾಡಬಾರದು: ಹಣಮಂತ ಮಳಲಿ ಹೇಳಿಕೆ

ದೇಶದಲ್ಲಿ ಒಂದೇ ಕಾನೂನು ಬರುವವರೆಗೂ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು ಎಂದು ಆರ್​ಎಸ್​ಎಸ್​ನ ಪ್ರಾಂತ ಸಹ ಸಂಯೋಜಕ ಹಣಮಂತ ಮಳಲಿ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು : ಹಣಮಂತ ಮಳಲಿ..

By

Published : Oct 14, 2019, 9:08 AM IST

ಬಾಗಲಕೋಟೆ: ದೇಶದಲ್ಲಿ ಒಂದೇ ಕಾನೂನು ಬರುವವರೆಗೂ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು ಎಂದು ಆರ್​ಎಸ್​ಎಸ್​ನ ಪ್ರಾಂತ ಸಹ ಸಂಯೋಜಕ ಹಣಮಂತ ಮಳಲಿ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದುಗಳು‌ ಸಹ ಜನಸಂಖ್ಯೆ ನಿಯಂತ್ರಣ ಮಾಡಬಾರದು: ಹಣಮಂತ ಮಳಲಿ

ಬಾಗಲಕೋಟೆ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ನಗರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ದೇಶವು ಇಲ್ಲಿಯವರೆಗೂ ಪ್ರತಿಶತ 63ರಷ್ಟು ಭೂಮಿಯನ್ನು ಕಳೆದುಕೊಂಡಿದೆ. ಇದರಿಂದ ಇಸ್ರೇಲ್, ಇರಾಕ್‌, ಇರಾನ್, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಇತರ ಭಾಗಗಳನ್ನು ಕಳೆದುಕೊಂಡಿದೆ. ದೇಹದ ಒಂದು ಭಾಗ ಕಡಿದರೆ ಕೊಳತು ಹೋಗುತ್ತದೆ. ಅದೇ ರೀತಿಯಾಗಿ ಈಗ ಎಲ್ಲಾ ದೇಶಗಳು ಕೊಳೆತು ಹೋಗಿದ್ದು, ತಾವಾಗಿಯೇ ವಾಪಸ್​ ಬರಲಿವೆ. ಈಗಾಗಲೇ 370 ವಿಧಿ ರದ್ದು ಮಾಡುವ ಮೂಲಕ ಜಮ್ಮು-ಕಾಶ್ಮೀರ ತೆಗೆದುಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ರಾಮ ಮಂದಿರ ಕಟ್ಟುವ ಕಾಲ ಬರುತ್ತದೆ.

ಪ್ರತಿ ನಗರದಲ್ಲಿಯೂ ರಾಮ ಮಂದಿರ ಕಟ್ಟುತ್ತೇವೆ. ಈಗಾಗಲೇ ವಿರೋಧ ಇದ್ದವರು ಸಹ ರಾಮ ಮಂದಿರ ಕಟ್ಟಲಿಕ್ಕೆ ಬೆಂಬಲ‌ ನೀಡುತ್ತಿದ್ದಾರೆ ಎಂದರು. ಜಗತ್ತಿನ ಮಹಾನ್​ ವ್ಯಕ್ತಿಗಳು ಆರ್​ಎಸ್​ಎಸ್ ಸಂಘಟನೆ ಬಗ್ಗೆ ಕೊಂಡಾಡಿದ್ದಾರೆ. ನಾವು ಪಥಸಂಚಲನ ಮಾಡುವುದು ವ್ಯಕ್ತಿಯ ಸಂಖ್ಯೆ ಏಣಿಕೆಗೆ ಅಲ್ಲ. ಈ ದೇಶದ ಕಾನೂನು, ಸಂಸ್ಕೃತಿ ಹಾಗೂ ಸಮಾಜವನ್ನು ಕಾಯಲು ಪೊಲೀಸ್, ಮಿಲಿಟರಿಯವರಿಂದ ಸಾಧ್ಯವಿಲ್ಲವಾದರೆ ನಾವು ಇದ್ದೀವೆ ಎಂದು ತೋರಿಸಲಿಕ್ಕೆ ಎಂದು ಹೇಳಿದರು.

ABOUT THE AUTHOR

...view details