ಬಾಗಲಕೋಟೆ :ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.
ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಪ್ರತಿಭಟನೆ.. ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯುವತಿಯ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟಿಸಿದರು. ಈ ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಕಳೆದ ಕೆಲ ದಿನಗಳಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವತಿಗೆ ಬಲೆ ಬೀಸಿ ಕಲಾದಗಿ ಗ್ರಾಮದ ಬಳಿಯಿರುವ ಸೇತುವೆ ಹತ್ತಿರ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಲ್ಲದೇ ಕೊಲೆ ಮಾಡಿ ನದಿಗೆ ಎಸೆದಿದ್ದಾರೆ. ಇಂತಹ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಹಿಂದು ಜಾಗರಣ ವೇದಿಕೆಯ ಮುಖಂಡ ಅಶೋಕ ಮುತ್ತಿನಮಠ ಒತ್ತಾಯಿಸಿದ್ದಾರೆ.
ಓದಿ: ಅತ್ಯಾಚಾರ ಎಸಗಿ ಯುವತಿಯ ಕೊಲೆ: ಕಲಾದಗಿ ಠಾಣೆಯಲ್ಲಿ ದೂರು ದಾಖಲು
ಜಿಲ್ಲಾಡಳಿತ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಶಿವು ಮೇಲ್ನಾಡ, ವಿಜಯ ಸುಲಾಖೆ, ಬಸವರಾಜ ಕಟಗೇರಿ, ರಾಜು ನಾಯಕ, ಶಂಕರಗೌಡ ಪಾಟೀಲ, ಪರಶುರಾಮ ತಳವಾರ ಸೇರಿ ಅನೇಕ ಕಾರ್ಯಕರ್ತರಿದ್ದರು.