ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಭಾರೀ ಮಳೆ: ಕೊಚ್ಚಿ ಹೋದ ರಸ್ತೆ - ಮನೆಗಳು ಜಲಾವೃತ

ಬಾಗಲಕೋಟೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ.

Rain in Bagalkot
ಬಾಗಲಕೋಟೆ ಮಳೆ

By

Published : Jun 3, 2021, 12:49 PM IST

Updated : Jun 3, 2021, 3:23 PM IST

ಬಾಗಲಕೋಟೆ : ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಜಿಲ್ಲೆಯ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ರಸ್ತೆ ಕೊಚ್ಚಿ ಹೋಗಿದೆ.

ಇಳಕಲ್​-ಕಂದಗಲ್ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಚ್ಚಿ ಹೋಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಕಿರು ಸೇತುವೆಯಲ್ಲಿ ಮುಳ್ಳು ಕಂಟಿಗಳು ತುಂಬಿದ ಕಾರಣ ರಸ್ತೆ ಮೇಲೆ ನೀರು ಹರಿದು ಹಾನಿಯಾಗಿದೆ.

ಮಳೆಯಿಂದ ಹಾನಿಯಾದ ರಸ್ತೆ

ಇನ್ನು ಮಳೆಯಿಂದ ಜಿಲ್ಲೆಯ ಅಮೀನಗಡ ಪಟ್ಟಣದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಅಮೀನಗಡ ಪಟ್ಟಣ ತಗ್ಗು ಪ್ರದೇಶವಾದ್ದರಿಂದ ಎಲ್ಲಾ ಕಡೆಯಿಂದ ನೀರು ಹರಿದು ಬಂದು ರಸ್ತೆಗಳು ಜಲಾವೃತವಾಗಿದ್ದವು.

ಮಳೆಯಿಂದ ಒಂಡೆದೆ ಅವಾಂತರಗಳು ಸೃಷ್ಟಿಯಾದರೆ, ಇನ್ನೊಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರು ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದಾರೆ.

ಓದಿ : ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಯುವಕ ಸಾವು

Last Updated : Jun 3, 2021, 3:23 PM IST

ABOUT THE AUTHOR

...view details