ಕರ್ನಾಟಕ

karnataka

ETV Bharat / state

ಬಾದಾಮಿಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ - ಮನೆಗೆ ನುಗ್ಗಿದ ಮಳೆ ನೀರು

ಕಳೆದ ಎರಡು ದಿ‌ನಗಳಿಂದ ಸುರಿಯುತ್ತಿದ್ದ ಭಾರಿ ಮಳೆಯು ಬಾದಾಮಿ ತಾಲೂಕಿನಲ್ಲಿ ಅವಾಂತರ ಉಂಟು ಮಾಡಿದೆ. ಯಂಕಂಚಿ, ಮಣಿನಾಗರ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾದಾಮಿ ಕೆರೂರು ಸಂಚಾರ ಬಂದ್ ಆಗಿದೆ.

Heavy rain in Badami
ಬಾದಾಮಿಯಲ್ಲಿ ಭಾರಿ ಮಳೆ

By

Published : Aug 4, 2022, 11:30 AM IST

Updated : Aug 4, 2022, 2:17 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ‌ ಅರ್ಭಟ ಮುಂದುವರೆದಿದ್ದು ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಬಾದಾಮಿ ತಾಲೂಕಿನಲ್ಲಿ ಸಹ ಸಾಕಷ್ಟು ಮಳೆಯಾದ ಪರಿಣಾಮ ಮನೆ ಹಾಗೂ ಜಮೀನುಗಳಿಗೆ ನೀರು‌ ನುಗ್ಗಿ ಸ್ಥಳೀಯರು ಪರದಾಡುವಂತಾಗಿದೆ.

ಭಾರಿ ಮಳೆಯಿಂದಾಗಿ ಯಂಕಂಚಿ, ಮಣಿನಾಗರ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬಾದಾಮಿ-ಕೆರೂರು ಸಂಚಾರ ಬಂದ್ ಆಗಿದೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ಯುವಕರು ಹುಚ್ಚು ಸಾಹಸ ಮಾಡುತ್ತಿರುವ ದ್ರಶ್ಯಗಳು ಕಂಡುಬರುತ್ತಿವೆ. ಹಳ್ಳ ತುಂಬಿ ರಸ್ತೆ ಮಾರ್ಗದ ಸೇತುವೆ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರೂ ಸ್ಥಳೀಯರು ನಡೆದುಕೊಂಡು ಬರುವುದು, ಬೈಕ್ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಬೇಡ ಎಂದ್ರೂ ಯುವಕನೊಬ್ಬ ಬೈಕ್​ನಲ್ಲಿ ಹೋಗಿ ಸೇತುವೆ ಮಧ್ಯೆ ಸಿಲುಕಿಕೊಂಡು ಮುಂದಕ್ಕೆ ಹೋಗಲಾಗದೇ ಪರದಾಡಿದ ಘಟನೆ ನಡೆಯಿತು. ನಂತರ ದಡದಲ್ಲಿದ್ದ ಇಬ್ಬರು ಯುವಕರು ಓಡಿ ಹೋಗಿ ಬೈಕ್ ಎಳೆದುಕೊಂಡು ಬಂದು ಯುವಕನನ್ನು ರಕ್ಷಿಸಿದರು.

ಬಾದಾಮಿಯಲ್ಲಿ ಭಾರಿ ಮಳೆ

ಮನೆಗೆ ನುಗ್ಗಿದ ಮಳೆ ನೀರು: ಈ ಮಧ್ಯೆ ಗೋವಕೊಪ್ಪ, ಕುಳಗೇರಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರ ಹಾಕುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಗುಡಿಸಲು ಹಾಗೂ ತಗಡಿನ ಶೆಡ್​ನಲ್ಲಿ ವಾಸ ಮಾಡುತ್ತಿರುವ ಜನ ರಾತ್ರಿ ಇಡೀ ನಿದ್ದೆ ಇಲ್ಲದೆ, ನೀರು ಹೊರ ಹಾಕುವ ಕೆಲಸದಲ್ಲಿ‌ ನಿರತರಾಗಿದ್ದರು. ಜೊತೆಗೆ ಚಿಮ್ಮನಕಟ್ಟಿ ಗ್ರಾಮ ಶಾಲೆಯ ಆವರಣದಲ್ಲಿ ನೀರು ನುಗ್ಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.

ಈ ಕುರಿತು ಸ್ಥಳಕ್ಕೆ ಪಿಡಿಒ ಹಾಗೂ ತಹಶೀಲ್ದಾರ್​ ಕಚೇರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ತಾಲೂಕಿನಲ್ಲಿ ಭಾರಿ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರಧನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಎದುರಾದ ಪ್ರವಾಹ ಭೀತಿ

Last Updated : Aug 4, 2022, 2:17 PM IST

ABOUT THE AUTHOR

...view details