ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಮುಂದುವರೆದ ವರುಣ ಅಬ್ಬರ: ಪ್ರವಾಹದ ಭೀತಿಯಲ್ಲಿ ಜನ ತತ್ತರ..! - Malaprabha, Ghataprabha and Krishna

ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ನಿರೀಕ್ಷೆ ಇರುವುದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಬಾಗಲಕೋಟೆಯಲ್ಲಿ ಮುಂದುವರೆದ ವರುಣ ಅಬ್ಬರ
ಬಾಗಲಕೋಟೆಯಲ್ಲಿ ಮುಂದುವರೆದ ವರುಣ ಅಬ್ಬರ

By

Published : Oct 15, 2020, 7:07 PM IST

Updated : Oct 15, 2020, 7:31 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣ ನದಿಗಳ ಅಬ್ಬರ ಹೆಚ್ಚಾಗಿದ್ದು,ಪ್ರವಾಹ ಭೀತಿ ಎದುರಾಗಿದೆ.

ಬಾಗಲಕೋಟೆಯಲ್ಲಿ ಮುಂದುವರೆದ ವರುಣ ಅಬ್ಬರ

ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಪ್ರಸಿದ್ಧ ಹೊಳೆಬಸವೇಶ್ವರ ದೇವಸ್ಥಾನಕ್ಕೆ‌ ಮತ್ತಷ್ಟು ನೀರು ನುಗ್ಗಿದ್ದು ಮತ್ತೆ ದೇವಸ್ಥಾನ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಾದ್ದರಿಂದ ಭಕ್ತರಿಗೆ ದೇವರ ದರ್ಶನ ಇಲ್ಲದಂತಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬಾಗಲಕೋಟೆ ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 68 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಹಿಪ್ಪರಗಿ ಜಲಾಶಯಕ್ಕೆ ಒಳಹರಿವು ಸಹ 68 ಸಾವಿರ ಕ್ಯೂಸೆಕ್ ಇದ್ದು, ಜಮಖಂಡಿ ತಾಲೂಕಿನ ನದಿ ಪಾತ್ರದಲ್ಲಿ ಆತಂಕ ಮೂಡಿಸಿದೆ. ಅಲ್ಲದೇ, ಶಾಲೆ ಸೇರಿದಂತೆ ಐತಿಹಾಸಿಕ ತಾಣಗಳಿಗೂ ನೀರು ನುಗ್ಗಿದ್ದು, ಐಹೊಳೆಯ ದುರ್ಗಾ ದೇವಾಲಯ ಹಾಗೂ ಇತರ ಸ್ಮಾರಕಗಳಲ್ಲಿ ನೀರಿನ ಹಾವಳಿಯಿಂದ ಆತಂಕಕ್ಕೆ ಕಾರಣವಾಗಿದೆ.

ಬಾಗಲಕೋಟೆ ತಾಲೂಕಿನ ಶಾರದಾಳ ಗ್ರಾಮದ ಮಲ್ಲಪ್ಪ‌ ಬಡಿಗೇರ ಅವರ ಮನೆಯ ಮುಂಭಾಗದ ಛಾವಣಿ‌ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈಗಾಗಲೆ ಜಿಲ್ಲಾಡಳಿತ ರೆಡ್ ಅಲರ್ಟ್​ ಘೋಷಣೆ ಮಾಡಿದ್ದು, ಇನ್ನೂ ಎರಡು ದಿನ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ನಿರೀಕ್ಷೆ ಇರುವುದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

Last Updated : Oct 15, 2020, 7:31 PM IST

ABOUT THE AUTHOR

...view details