ಬಾಗಲಕೋಟೆ: ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಮಾಡಲಾಗಿದ್ದು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಪ್ರಮುಖವಾಗಿ ಬಾಳೆ, ದ್ರಾಕ್ಷಿ ಬೆಳೆದ ರೈತರು ಈ ಭಾರಿ ಕೊರೊನಾ ವೈರಸ್ ಪರಿಣಾಮ ಮಾರುಕಟ್ಟೆ ಇಲ್ಲದೆ, ಸರಿಯಾದ ದರ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ.
ನಷ್ಟದಲ್ಲಿ ಬಾಳೆ, ದ್ರಾಕ್ಷಿ ಬೆಳೆದ ರೈತರು ಜಿಲ್ಲೆಯಲ್ಲಿ ಬಾದಾಮಿ, ಬೀಳಗಿ, ಮುಧೋಳ ಹಾಗೂ ಜಮಖಂಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಳೆ ಹಾಗೂ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತದೆ. 2,300 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತದೆ. ಅದೇ ರೀತಿ 1200 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತದೆ. ನೂರಾರು ರೈತ ಕುಟುಂಬದವರು ದ್ರಾಕ್ಷಿ ಹಾಗೂ ಬಾಳೆ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಬೆಳೆದ ದ್ರಾಕ್ಷಿಯನ್ನ ಸಾಮಾನ್ಯ ದಿನಗಳಲ್ಲಿ ಮಾರಾಟ ಮಾಡಿದರೆ ಎರಡು ಲಕ್ಷ ಆದಾಯ ಬರುತ್ತಿತ್ತು.
ನಷ್ಟದಲ್ಲಿ ಬಾಳೆ, ದ್ರಾಕ್ಷಿ ಬೆಳೆದ ರೈತರು ಆದರೆ, ಈಗ ಮಾರುಕಟ್ಟೆ ಬಂದ್ ಆಗಿರುವುದರಿಂದ ಖರೀದಿದಾರರು ಬಾರದ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ವೇತನ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಜಿಲ್ಲೆಯ 2,300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಯಿಂದ 46 ಕೋಟಿ ರೂ. ವ್ಯವಹಾರ ನಡೆಯುತ್ತಿತ್ತು. ಆದರೆ ಈಗ ಪ್ರತಿ ಎಕರೆಗೆ ವೆಚ್ಚ ಮಾಡಿದ ಹಣ ಸಹ ಸಿಗದಷ್ಟು ದರ ಸಿಗುತ್ತಿಲ್ಲ. ಏಕೆಂದರೆ ಖರೀದಿದಾರರು ಇಲ್ಲದೆ ದರ ಕಡಿಮೆ ಆಗಿದ್ದು, ಕೆಜಿಗೆ 5-10 ರೂಪಾಯಿ ಮಾತ್ರ ದರವಿದೆ.
ನಷ್ಟದಲ್ಲಿ ಬಾಳೆ, ದ್ರಾಕ್ಷಿ ಬೆಳೆದ ರೈತರು ಇನ್ನು ಜಿಲ್ಲೆಯಲ್ಲಿ ಜಿ-9 ತಳಿಯ ಬಾಳೆಹಣ್ಣು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಬೀಳಗಿ, ಬಾದಾಮಿ, ಜಮಖಂಡಿ ಹಾಗೂ ಮುಧೋಳ ತಾಲೂಕಿನಲ್ಲಿ ಹೆಚ್ಚಾಗಿ ಬಾಳೆಹಣ್ಣು ಬೆಳೆಗಾರರು ಇದ್ದಾರೆ. ಕೊರೊನಾ ವೈರಸ್ ಭೀತಿಯಿಂದ ಮಾರಾಟ ಇಲ್ಲದಿದ್ದರಿಂದ ಅತಿ ಹೆಚ್ಚು ತೂಕವಾಗಿ ಬಾಳೆ ಸಸಿಯ ಸಮೇತ ಕೆಳಗೆ ಬಿದ್ದು, ಕೊಳೆತು ನಾಶವಾಗುತ್ತಿವೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆಹಣ್ಣು ಬೆಳೆಗೆ ಎರಡರಿಂದ ಐದು ಲಕ್ಷ ರೂಪಾಯಿ ಲಾಭ ಬರುತ್ತಿತ್ತು.