ಕರ್ನಾಟಕ

karnataka

ETV Bharat / state

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹನ್ನೆರಡುಮಠ ಆಯ್ಕೆ - ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹನ್ನೆರಡುಮಠ ಆಯ್ಕೆ

ಜನವರಿ 4 ಮತ್ತು 5 ರಂದು ನಡೆಯಲಿರುವ 8ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರನ್ನಾಗಿ ಪ್ರೊ.ಜಿ.ಎಚ್.ಹನ್ನೆರಡುಮಠ ಅವರನ್ನು ಆಯ್ಕೆ ಮಾಡಲಾಗಿದೆ.

Hanneradu Mata
ಪ್ರೊ.ಜಿ.ಎಚ್.ಹನ್ನೆರಡುಮಠ

By

Published : Dec 12, 2019, 7:47 AM IST

ಬಾಗಲಕೋಟೆ: ಹುನಗುಂದ ತಾಲೂಕಿನ ಇಲಕಲ್ಲಿನಲ್ಲಿ ಜನವರಿ 4 ಮತ್ತು 5 ರಂದು ನಡೆಯಲಿರುವ 8ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರನ್ನಾಗಿ ಪ್ರೊ.ಜಿ.ಎಚ್.ಹನ್ನೆರಡುಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ತಿಳಿಸಿದ್ದಾರೆ.

ಬುಧವಾರ ನವನಗರದ ಸಾಹಿತ್ಯ ಪರಿಷತ್ತಿನಲ್ಲಿ ಈ ಕುರಿತು ಜರುಗಿದ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಜಿ.ಎಚ್.ಹನ್ನೆರಡುಮಠ ಅವರು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 30 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಜಗದ್ಗುರು ಮೂರುಸಾವಿರ ಮಠದ ಪ್ರಕಾಶನದ 600 ಪುಸ್ತಕಗಳ ಪ್ರಕಟಣೆಯಲ್ಲಿ ಸಮಗ್ರ ಯೋಜನೆ ಸಿದ್ದಪಡಿಸಿದ್ದಾರೆ. ಸಾಹಿತ್ಯ, ಸಂಸ್ಕಂತಿ, ಧರ್ಮ, ಯೋಗ, ಶಿಕ್ಷಣ, ಕಲೆ ಕುರಿತು ದಿಲ್ಲಿ, ಕಲ್ಕತ್ತ, ಅಬೂಪರ್ವತ, ಡೆಹರಾಡೂನ, ಮದ್ರಾಸ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಇವರು 17 ಕಾದಂಬರಿ, 13 ಕವನ ಸಂಕಲನ, 35 ನಾಟಕ, 10 ಕಥಾ ಸಂಕಲನ, 3 ವಿನೋದ ಸಾಹಿತ್ಯ, 4 ಲಲಿತ ಪ್ರಬಂಧ, 2 ಪ್ರವಾಸ ಕಥನ, ಒಂದು ವಚನ ರಚನೆ, 8 ಅಪ್ರಕಟಿತ ಸೇರಿದಂತೆ ಒಟ್ಟು 110 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ 6 ಚಲಚಿತ್ರಗಳನ್ನು ಬರೆದಿದ್ದಾರೆ. 11 ಧ್ವನಿ ಸುರಳಿ ಬಿಡುಗಡೆ ಮಾಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details