ಬಾಗಲಕೋಟೆ :ಇಂದಿನಿಂದ ಮದ್ಯ ಮಾರಾಟ ಪ್ರಾರಂಭ ಮಾಡುತ್ತಿರುವುದನ್ನು ಕೆಲ ಮಠಾದೀಶರು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿರುವ ವಿಜಯ ಮಹಾಂತ ಮಠದ ಗುರು ಮಹಾಂತ ಶ್ರೀಗಳು ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮದ್ಯ ಮಾರಾಟ ನಿಷೇಧಕ್ಕೆ ಮುಖ್ಯಮಂತ್ರಿಗೆ ಪತ್ರ ಬರೆದ ಗುರು ಮಹಾಂತ ಶ್ರೀ.. - Guru Mahanth Shree
ಇಲಕಲ್ಲ ಪಟ್ಟಣದಲ್ಲಿರುವ ವಿಜಯ ಮಹಾಂತ ಮಠದ ಗುರು ಮಹಾಂತ ಶ್ರೀಗಳು ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಗುರು ಮಹಾಂತ ಶ್ರೀಗಳು
ವಿಜಯ ಮಹಾಂತ ಮಠದ ಗುರು ಮಹಾಂತ ಶ್ರೀಗಳು
ಇದರ ಬಗ್ಗೆ ಮಾತನಾಡಿದ ಅವರು, ಕೆಟ್ಟ ಚಟಗಳನ್ನು ದೂರ ಮಾಡಿಸುವ ಮಠ ಎಂದು ಹೆಸರು ವಾಸಿಯಾಗಿರುವ ಇಲಕಲ್ಲ ವಿಜಯ ಮಹಾಂತ ಮಠದ ಲಿಂಗ್ಯಕ್ಯೆ ಮಹಾಂತ ಶ್ರೀಗಳು ತಮ್ಮ ಜೋಳಿಗೆಗೆ ಕೆಟ್ಟ ಚಟವನ್ನು ಹಾಕಿರಿ ಎಂದು ಜಾಗೃತಿ ಮೂಡಿಸಿ ಚಟವನ್ನು ಹೋಗಲಾಡಿಸಲು ಜೋಳಿಗೆ ಹಾಕಿದ್ದರು. ಅದರ ನಿಮಿತ್ತ ಅಗಸ್ಟ್ 1ರಂದು ಸರ್ಕಾರ ವ್ಯಸನ ಮುಕ್ತ ದಿನಾಚರಣೆ ಆಚರಣೆ ಮಾಡಲಾಗಿತ್ತು ಎಂದರು.
ಇದರ ಕುರಿತು ಗುರು ಮಹಾಂತ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರದ ಮೂಲಕ ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.