ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಆಕ್ಷನೇಡ್​ ಸಂಸ್ಥೆ ವತಿಯಿಂದ ದಿನಸಿ ಪದಾರ್ಥಗಳ ಕಿಟ್​ ವಿತರಣೆ - Actionaid Organization

ಆಕ್ಷನೇಡ್​ ಸಂಸ್ಥೆಯ ರಿಜನಲ್ ಮ್ಯಾನೇಜರ್ ನಂದಿನಿ ಅವರ ಮಾರ್ಗದರ್ಶನದಲ್ಲಿ ಮುಧೋಳ ತಾಲೂಕಿನ ಸೋರಗಾಂವ್, ಬರಗಿ, ಗುಲಗಾಲ, ಜಂಬಗಿ, ಒಂಟಗೋಡಿ, ನಾಗರಾಳ, ಮಾಲಾಪುರ ಸೇರಿದಂತೆ ಶೋಷಿತ ವರ್ಗದ ನೂರಾರು ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್​ನ್ನು ವಿತರಿಸಲಾಯಿತು.

Groceries kit   Distribution
ಆಕ್ಷನೇಡ್​ ಸಂಸ್ಥೆ ವತಿಯಿಂದ ದಿನಸಿ ಪದಾರ್ಥಗಳ ಕಿಟ್​ ವಿತರಣೆ

By

Published : May 23, 2020, 10:02 PM IST

ಬಾಗಲಕೋಟೆ:ಸರ್ಕಾರದ ಯೋಜನೆಗಳಿಂದ ದೂರ ಉಳಿದ ಶೋಷಿತರು, ದಲಿತರು ಮತ್ತು ದೇವದಾಸಿಯರ ಕುಟುಂಬಗಳನ್ನು ಗುರುತಿಸಿ ಬೆಂಗಳೂರಿನ ಆಕ್ಷನೇಡ್​ ಸಂಸ್ಥೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳ ಕಿಟ್​ನ್ನು ವಿತರಿಸಿದೆ.


ಮುಧೋಳ ತಾಲೂಕ ಮೇಲ್ವಿಚಾರಕರಾದ ಶಿವಾನಂದ ಹಣಮಂತ ಮ್ಯಾಗೇರಿ ಹಾಗೂ ಸಂಸ್ಥೆಯ ರಿಜನಲ್ ಮ್ಯಾನೇಜರ್ ನಂದಿನಿ ಅವರ ಮಾರ್ಗದರ್ಶನದಲ್ಲಿ, ಮುಧೋಳ ತಾಲೂಕಿನ ಸೋರಗಾಂವ್, ಬರಗಿ, ಗುಲಗಾಲ, ಜಂಬಗಿ, ಒಂಟಗೋಡಿ, ನಾಗರಾಳ, ಮಾಲಾಪುರ ಸೇರಿದಂತೆ ಶೋಷಿತ ವರ್ಗದ ನೂರಾರು ಕುಟುಂಬಗಳಿಗೆ ನೆರವು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಿವಾನಂದ ಮ್ಯಾಗೇರಿ, ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಹೆಮ್ಮೆ ಇದೆ. ನಮ್ಮ ಸಂಸ್ಥೆ 20 ವರ್ಷಗಳಿಂದ ಸಮಾಜಮುಖಿಯಾಗಿ ಸೇವೆ ಮಾಡುತ್ತಾ ಬಂದಿದ್ದು, ನೆರೆ ಸಂತ್ರಸ್ತರಿಗೆ ಸಹ ಕಿಟ್ ವಿತರಣೆ ಮಾಡಿದ್ದೇವೆ. ಸ್ಕೂಲ್ ಮಕ್ಕಳಿಗೆ ಬ್ಯಾಗ್ ವಿತರಣೆ ಸೇರಿದಂತೆ ಬಡವರ ಕಷ್ಟಗಳಿಗೆ ನಮ್ಮ ಸಂಸ್ಥೆಯ ನಂದಿನಿ ಮೇಡಂ ಸಹಾಯ ಮಾಡುತ್ತಲೇ ಬಂದಿದ್ದಾರೆ ಎಂದರು.


ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ನಿಜವಾದ ಸಮಸ್ಯೆ ಇರುವವರೆಗೆ ಈ ಸಂಸ್ಥೆ ಸಹಾಯ ಹಸ್ತ ಚಾಚುತ್ತಾ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಂದ ಘಟಪ್ರಭಾ ನದಿಯ ಪ್ರವಾಹ ಸಮಯದಲ್ಲಿಯೂ ತೊಂದರೆಗೆ ಒಳಗಾಗಿದ್ದ ದಲಿತರು, ಶೋಷಿತರ ಕುಟುಂಬಗಳಿಗೆ ಆಹಾರ ಧಾನ್ಯ ಸೇರಿದಂತೆ ಇತರ ಸಾಮಗ್ರಿಗಳನ್ನು ನೀಡಿದ್ದರು. ಈಗ ಕೊರೊನಾ ಸಮಯದಲ್ಲಿಯೂ ವಿಶೇಷ ಚೇತನರಿಗೆ, ಮಾಜಿ ದೇವದಾಸಿ ಮಹಿಳೆಯರಿಗೆ ಹಾಗೂ ಕಡು ಬಡುವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ, ಸಾಮಾಜಿಕ ಸೇವೆಯಲ್ಲಿ ತೊಡಗಲಾಗಿದೆ.

ABOUT THE AUTHOR

...view details