ಕರ್ನಾಟಕ

karnataka

ETV Bharat / state

ಗ್ರಾಮ ಚುನಾವಣೆ: ಸಮರದ ಬಳಿಕ ಚರ್ಚೆಗೆ ಗ್ರಾಸವಾದ ಬೆಂಬಲಿತ ಸದಸ್ಯರ ಆಯ್ಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮ ಪಂಚಾಯತ್ ಚುನಾವಣೆ ಸಮಯದಲ್ಲಿ ಎರಡು ದಿನ ಪ್ರವಾಸ ಮಾಡಿ, ಪ್ರಚಾರ ಮಾಡಿ ಹೋಗಿದ್ದರು. ಈ ಹಿನ್ನಲೆ ಬೆಂಬಲಿಗರ ಬಗ್ಗೆ ಕುತೂಹಲ ಮೂಡಿಸಿತ್ತು.

Bagalkota
ಗ್ರಾಮ ಚುನಾವಣೆ

By

Published : Dec 31, 2020, 10:50 PM IST

ಬಾಗಲಕೋಟೆ: ಗ್ರಾಮ ಪಂಚಾಯತ್ ಚುನಾವಣೆ ನಡೆದು, ಮತ ಎಣಿಕೆ ಸಂಪೂರ್ಣ ಮುಗಿದ ಹಿನ್ನಲೆ ಗ್ರಾಮೀಣ ಪ್ರದೇಶದಲ್ಲಿ ಯಾವ ಸದಸ್ಯರು ಯಾವ ಪಕ್ಷದ ಬೆಂಬಲಿಗರು, ಎಷ್ಟು ಸದಸ್ಯರು ಯಾವ ಪಕ್ಷದ ಪರವಾಗಿ ಇದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಮುಖವಾಗಿ ಎರಡು ಮತಕ್ಷೇತ್ರಗಳು ಗಮನ ಸೆಳೆಯುತ್ತದೆ. ಒಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ. ಇಲ್ಲಿ ಎಷ್ಟು ಗ್ರಾಮ ಪಂಚಾಯತ್ ಅವರ ಪರವಾದ ಬೆಂಬಲಿಗರು ಆಯ್ಕೆ ಆಗಿದ್ದಾರೆ ಎಂಬುದು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಆಗಿರುವ ಬಾದಾಮಿ ಕ್ಷೇತ್ರದಲ್ಲಿ ನಿರೀಕ್ಷೆ ಮಾಡಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಕೈ ಮೇಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ 35 ಗ್ರಾಮ ಪಂಚಾಯಿತಿಗಳಲ್ಲಿ, ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು 288, ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರ ಸಂಖ್ಯೆ 177, ಜೆಡಿಎಸ್ ಪಕ್ಷದ ಸದಸ್ಯರು 25, ಪಕ್ಷೇತರರು 15, ಒಟ್ಟು 505 ಸದಸ್ಯರು ಆಯ್ಕೆ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗ್ರಾಮ ಪಂಚಾಯತ್ ಚುನಾವಣೆ ಸಮಯದಲ್ಲಿ ಎರಡು ದಿನ ಪ್ರವಾಸ ಮಾಡಿ, ಪ್ರಚಾರ ಮಾಡಿ ಹೋಗಿದ್ದರು. ಈ ಹಿನ್ನೆಲೆ ಬೆಂಬಲಿಗರ ಬಗ್ಗೆ ಕುತೂಹಲ ಮೂಡಿಸಿತ್ತು.

ಇನ್ನು ಮುಧೋಳ ಮತ ಕ್ಷೇತ್ರದ ಶಾಸಕರು ಆಗಿರುವ ಉಪ‌ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಹ, ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡು ಕಾರ್ಯತಂತ್ರ ರೂಪಿಸಿ, ಅವರ ಪುತ್ರ ಅರುಣ ಕಾರಜೋಳ‌ ಅವರಿಗೆ ನಿರ್ವಹಣೆ ಮಾಡುವಂತೆ ಸೂಚನೆ ಮಾಡಿದ್ದರು. ಈ ಹಿನ್ನೆಲೆ ಮುಧೋಳ ತಾಲೂಕಿನಲ್ಲಿ 22 ಗ್ರಾಮ ಪಂಚಾಯತ್ ಇದ್ದು, ಒಟ್ಟು ಸದಸ್ಯರುಗಳ ಸಂಖ್ಯೆ -396 ಇದೆ. ಇದರಲ್ಲಿ ಬಿಜೆಪಿ ಬೆಂಬಲಿತರು -206, ಕಾಂಗ್ರೆಸ್ ಬೆಂಬಲಿತರು-149 ಸದಸ್ಯರು, ಜೆಡಿಎಸ್-00 ಹಾಗೂ ಇತರರು-13 ಹಾಗೂ ರೈತ ಸಂಘದ ಬೆಂಬಲಿತ -28 ಸದಸ್ಯರು ಆಯ್ಕೆ ಆಗಿದ್ದಾರೆ. ಈ ಮೂಲಕ ಉಪ ಮುಖ್ಯಮಂತ್ರಿ ಕಾರಜೋಳ ಅವರ ತಮ್ಮ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಜಮಖಂಡಿ ತಾಲೂಕಿನ 26 ಗ್ರಾ.ಪಂಗಳ ಪೈಕಿ 25 ಗ್ರಾಮ ಪಂಚಾಯತ್​ಗೆ ಸ್ಪರ್ಧಿಸಿರುವ 1070 ಅಭ್ಯರ್ಥಿಗಳ ಪೈಕಿ 425 ಅಭ್ಯರ್ಥಿಗಳು ಆಯ್ಕೆ ಆಗಿದ್ದು, ಸಾವಳಗಿ ತಾಲೂಕನ್ನು ಕೇಂದ್ರವಾಗಿಸುವಂತೆ ಒತ್ತಾಯಿಸಿ ಗ್ರಾ.ಪಂ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ್​ನಲ್ಲಿ 32 ಸ್ಥಾನಗಳ ಚುನಾವಣಾ ಪ್ರಕ್ರಿಯೆ ನಡೆಯಲಿಲ್ಲ. ಆಯ್ಕೆ ಆದ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ 225, ಬಿಜೆಪಿ ಬೆಂಬಲಿತ 229, ಪಕ್ಷೇತರ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 12 ಗ್ರಾಮ ಪಂಚಾಯತ್​ನಲ್ಲಿ ಬಿಜೆಪಿ 10 ಗ್ರಾಮ ಪಂಚಾಯತ್,​ ಕಾಂಗ್ರೇಸ್​ 2 ಗ್ರಾಮ ಪಂಚಾಯತ್​ನಲ್ಲಿ ಅತಂತ್ರವಾಗಿದೆ. ಕಾಂಗ್ರೆಸ್ ಪಕ್ಷದ‌ ಶಾಸಕ ಆನಂದ ನ್ಯಾಮಗೌಡರ ವರ್ಚಸ್ಸು ಇದ್ದರೂ ಸಹ ಬಿಜೆಪಿ ಪಕ್ಷದ ಸದಸ್ಯರು ಹೆಚ್ಚಾಗಿ ಆಯ್ಕೆ ಆಗಿರುವುದು ಚರ್ಚೆಯ ವಿಷಯವಾಗಿದೆ.

ABOUT THE AUTHOR

...view details