ಬಾಗಲಕೋಟೆ:ಧಾರ್ಮಿಕ ಕ್ಷೇತ್ರ ಹಾಗೂ ಅಣ್ಣ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿ ನೀಡಿ, ಸಂಗಮನಾಥನ ದರ್ಶನ ಪಡೆದರು. ತ್ರಿವೇಣಿ ಸಂಗಮ ಕೂಡಲಸಂಗಮಕ್ಕೆ ರಾಜ್ಯಪಾಲರ ಮೊದಲ ಭೇಟಿ ಇದಾಗಿದ್ದು ದೇವಾಲಯದ ಬಗ್ಗೆ ಮಾಹಿತಿ ಪಡೆದರು.
ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ - ಕೂಡಲಸಂಗಮದ ಮಹತ್ವ
ಕೂಡಲಸಂಗಮದ ಐಕ್ಯಮಂಟಪದ ದರ್ಶನ ಪಡೆದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಬಸವಣ್ಣ ಹಾಗೂ ಧಾರ್ಮಿಕ ಕೇಂದ್ರದ ಬಗ್ಗೆ ಮಾಹಿತಿ ಪಡೆದುಕೊಂಡರು.
Governor Thawar Chand Gehlot visits Kudala Sangama
ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಲಮಟ್ಟಿಯಿಂದ ಕೂಡಲಸಂಗಮಕ್ಕೆ ಆಗಮಿಸಿದ ರಾಜ್ಯಪಾಲರು ಮೊದಲು ಸಂಗಮನಾಥನ ದರ್ಶನ ಪಡೆದಿದ್ದು ಬಳಿಕ ಬಸವಣ್ಣನವರ ಐಕ್ಯಮಂಟಪದ ಕಡೆ ಹೊರಟರು. ಐಕ್ಯ ಸ್ಥಳವನ್ನು ನೀರಿನಲ್ಲಿ ಕಟ್ಟಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗೆಹ್ಲೋಟ್ ಅಚ್ಚರಿ ವ್ಯಕ್ತಪಡಿಸಿದರು.
ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಸಂಗಮದಲ್ಲಿ ಬಿಗಿ ಪೊಲೀಸ್ ಭದ್ರತೆ ಕಂಡುಬಂತು. ಭಕ್ತರ ದರ್ಶನ ನಿರ್ಬಂಧವಿತ್ತು.