ಕರ್ನಾಟಕ

karnataka

ETV Bharat / state

ದಾಳಿಂಬೆ ಬೆಳೆಗಾರರಿಗೂ ವಿಮೆ ತುಂಬಲು ಕಾಲಾವಕಾಶ ನೀಡಿ: ಸರ್ಕಾರಕ್ಕೆ ಆರ್.ಬಿ. ತಿಮ್ಮಾಪೂರ ಒತ್ತಾಯ - ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಸುದ್ದಿ

ದಾಳಿಂಬೆ ಬೆಳೆಗಾರರಿಗೆ ಜುಲೈ 1 ನೀಡಿದ್ದು, ನೋಟಿಫಿಕೇಶನ್ ನೀಡಿದ ಒಂದೇ ದಿನದ ಅಂತರದಲ್ಲಿ ವಿಮೆ ಮಾಡಿಸಲು‌ ಕೊನೆಯ ದಿನ ಎಂದು ತಿಳಿಸಿದ್ದಾರೆ. ಇದರಿಂದ ದಾಳಿಂಬೆ ಬೆಳೆಗಾರರಿಗೆ ಒಂದೇ ದಿನದಲ್ಲಿ ವಿಮೆ ಮಾಡುವುದು ಹೇಗೆ ಸಾಧ್ಯ ಇದೆ ಎಂದು ವಿಧಾನ ಪರಿಷತ್​ ಸದಸ್ಯ ಆರ್​ ಬಿ ತಿಮ್ಮಾಪೂರ​ ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ
ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ

By

Published : Jun 30, 2020, 2:01 PM IST

ಬಾಗಲಕೋಟೆ: ದ್ರಾಕ್ಷಿ ಬೆಳೆಗಾರರಿಗೆ ಜಾರಿ ಮಾಡಿದ ವಿಮೆ ಮಾದರಿಯಲ್ಲಿಯೇ ದಾಳಿಂಬೆ ಬೆಳೆಗಾರರಿಗೂ ಅವಕಾಶ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರಿಗೆ ವಿಮೆ ತುಂಬುವ ಕೊನೆಯ ದಿನವನನ್ನು ಸೆಪ್ಟೆಂಬರ್ 1 ರವೆಗೆ ವಿಸ್ತರಿಸಲಾಗಿದೆ. ಆದರೆ ದಾಳಿಂಬೆ ಬೆಳೆಗಾರರಿಗೆ ಜುಲೈ 1ವರೆಗೆ ಅವಕಾಶ ನೀಡಿದ್ದು, ನೋಟಿಫಿಕೇಶನ್ ನೀಡಿದ ಒಂದೇ ದಿನದ ಅಂತರದಲ್ಲಿ ವಿಮೆ ಮಾಡಿಸಲು‌ ಕೊನೆಯ ದಿನ ಎಂದು ತಿಳಿಸಿದ್ದಾರೆ. ಇದರಿಂದ ದಾಳಿಂಬೆ ಬೆಳೆಗಾರರಿಗೆ ಒಂದೇ ದಿನದಲ್ಲಿ ವಿಮೆ ಮಾಡಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ

ಕಲಾದಗಿ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರು ಹೆಚ್ಚಾಗಿ ಇದ್ದು, ಕೊರೊನಾದಿಂದ ಕಲಾದಗಿ ಗ್ರಾಮ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. ಇದರಿಂದ ರೈತರಿಗೆ ವಿಮೆ‌ ತುಂಬಲು ಅವಕಾಶವೇ ಇಲ್ಲ. ಮೊದಲೇ ಕೊರೊನಾದಿಂದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ನಷ್ಟ ಅನುಭವಿಸುತ್ತಿರುವ ದಾಳಿಂಬೆ ‌ಬೆಳೆಗಾರರಿಗೆ ವಿಮೆ ತುಂಬುವುದಕ್ಕೆ ಹೆಚ್ಚಿನ ದಿನದವರೆಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ತಿಮ್ಮಾಪೂರ ಆಗ್ರಹಿಸಿದ್ದಾರೆ.

ABOUT THE AUTHOR

...view details