ಕರ್ನಾಟಕ

karnataka

ETV Bharat / state

ಅತ್ಯಾಚಾರ ಎಸಗಿ ಯುವತಿಯ ಕೊಲೆ: ಕಲಾದಗಿ ಠಾಣೆಯಲ್ಲಿ ದೂರು ದಾಖಲು - ಯುವತಿ ರೇಪ್

ಅತ್ಯಾಚಾರ ಎಸಗಿ ಯುವತಿಯನ್ನು ಕೊಲೆ ಮಾಡಿ, ಶವ ಬಿಸಾಕಿ ಹೋಗಿರುವ ಬಗ್ಗೆ ದೂರು ದಾಖಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Girl Rape and murder
ಅತ್ಯಾಚಾರ ಎಸಗಿ ಯುವತಿಯ ಕೊಲೆ

By

Published : Feb 17, 2021, 12:18 AM IST

ಬಾಗಲಕೋಟೆ:ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ, ಜಿಲ್ಲೆಯ ಕಲಾದಗಿ ಸೇತುವೆ ಬಳಿ ಶವ ಎಸೆದಿರುವ ಬಗ್ಗೆ ದೂರು ದಾಖಲಾಗಿದೆ.

ಅಂಕಲಗಿ ಸೇತುವೆ ಬಳಿ ಯುವತಿಯ ಮೃತ ದೇಹ ಪತ್ತೆಯಾಗಿದೆ. ಹನೀಪ್ ಎಂಬ ಯುವಕನೇ ಕೃತ್ಯ ಎಸಗಿದ್ದಾನೆ ಎಂದು ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನರ್ಸಿಂಗ್ ಮುಗಿಸಿರುವ ಯುವತಿಯು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹನೀಪ್ ಸಹ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಕೂಲಿ‌ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ಹೋದ ಯುವತಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ನಾಪತ್ತೆ ಆಗಿರುವ ಬಗ್ಗೆ ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಕಲಾದಗಿಯಿಂದ ಕಾತರಕಿ ಗ್ರಾಮಕ್ಕೆ ಹೋಗುವ ಅಂಕಲಗಿ ಸೇತುವೆ ಬಳಿ ಯುವತಿಯ ಶವ ಪತ್ತೆ ಆಗಿದೆ.

ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಕೊಲೆ ಆಗಿರುವ ಯುವತಿಯ ಸಹೋದರರ ಮಾವ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details