ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ನಲ್ಲಿ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಹಿಪ್ಪರಗಿ ಹಳೇಪೂರ ಮಠದ ರಸ್ತೆ ಮುಳುಗಡೆ ಆಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಕೆಸರು ಗದ್ದೆಯಂತಾದ ರಸ್ತೆ: ವಾಹನ ಸವಾರರ ಪರದಾಟ - Road problems in karnataka
ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ನಲ್ಲಿ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ ಹಿಪ್ಪರಗಿ ಹಳೇಪೂರ ಮಠದ ರಸ್ತೆ ಮುಳುಗಡೆ ಆಗಿದೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕೆಸರು ಗದ್ದೆಯಂತಾದ ಶಿರಗುಂಪಿ ಗ್ರಾಮದ ರಸ್ತೆ
ಇನ್ನು, ಶಿರಗುಂಪಿ ಗ್ರಾಮ ಸೇರಿದಂತೆ ಸುಮಾರು ನೂರು ಕುಟುಂಬದವರು ಸಂಚರಿಸುವ ರಸ್ತೆಯು ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಪಾದಚಾರಿಗಳಿಗಳು, ವಾಹನ ಸವಾರರು ಪ್ರಸವವೇದನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸ್ಥಳೀಯ ಪಿಡಿಒ ನೋಡಲ್ ಅಧಿಕಾರಿಗಳು ಹಾಗೂ ತಹಶಿಲ್ದಾರ್ ಅವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.