ಕರ್ನಾಟಕ

karnataka

ETV Bharat / state

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಕಿತರಿಗೆ ಉಚಿತ ವಾಹನ ವ್ಯವಸ್ಥೆ

ಜಿಲ್ಲೆಯ ಬೀಳಗಿ, ಬಾಗಲಕೋಟೆ, ಹುನಗುಂದ, ಬಾದಾಮಿ ಹಾಗೂ ಜಮಖಂಡಿ ತಾಲೂಕಿನಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ತಾಲೂಕಿನಲ್ಲಿ ಯಾರೇ ಕೋವಿಡ್ ಸೋಂಕಿತರು ಇದ್ದಲ್ಲಿ, ಉಚಿತವಾಗಿ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗೆ ಅಥವಾ ಖಾಸಗಿ ಆಸ್ಪತ್ರೆ ಚಿಕಿತ್ಸೆಗಾಗಿ ಹೋಗಬಹುದು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಕಿತರಿಗೆ ಉಚಿತ ವಾಹನ ವ್ಯವಸ್ಥೆ
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಕಿತರಿಗೆ ಉಚಿತ ವಾಹನ ವ್ಯವಸ್ಥೆ

By

Published : May 10, 2021, 11:50 AM IST

ಬಾಗಲಕೋಟೆ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯ ವತಿಯಿಂದ ಜಿಲ್ಲೆಯ ಪ್ರಮುಖ ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದ್ದು, ಈ ವಾಹನಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಕಿತರಿಗೆ ಉಚಿತ ವಾಹನ ವ್ಯವಸ್ಥೆ

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ​ ಕಾರಜೋಳ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕೋವಿಡ್ ಸೋಂಕಿತರು ಸಂಚರಿಸಲು ಉಚಿತ ವಾಹನ ನೀಡಿರುವುದು ಅಭಿನಂದನಾರ್ಹವಾಗಿದೆ ಎಂದರು.

ಜಿಲ್ಲೆಯ ಬೀಳಗಿ, ಬಾಗಲಕೋಟೆ, ಹುನಗುಂದ, ಬಾದಾಮಿ ಹಾಗೂ ಜಮಖಂಡಿ ತಾಲೂಕಿನಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ತಾಲೂಕಿನಲ್ಲಿ ಯಾರೇ ಕೋವಿಡ್ ಸೋಂಕಿತರು ಇದ್ದಲ್ಲಿ, ಉಚಿತವಾಗಿ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗೆ ಅಥವಾ ಖಾಸಗಿ ಆಸ್ಪತ್ರೆ ಚಿಕಿತ್ಸೆಗಾಗಿ ಹೋಗಬಹುದು. ಡ್ರೈವರ್ ನಂಬರ್​ ನೀಡಲಾಗಿದ್ದು, ತೊಂದರೆ ಇದ್ದಲ್ಲಿ ಸಂಪರ್ಕಸಬಹುದು. ಸಂಸ್ಥೆಯ ವತಿಯಿಂದ ಚಾಲಕರಿಗೆ ಪಿಪಿಇ ಕಿಟ್ ನೀಡಲಾಗಿದೆ. ಆಯಾ ತಾಲೂಕಿಗೆ ಒಂದರಂತೆ ವಾಹನ ವ್ಯವಸ್ಥೆ ಮಾಡಲಾಗಿದ್ದು, ಇದರ ಉಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಯೋಜನಾಧಿಕಾರಿ ಮಹೇಶ ತಿಳಿಸಿದ್ದಾರೆ.

ಓದಿ : ಶಾಕಿಂಗ್​ ಸುದ್ದಿ.. ಇತರೆ ಕಾಯಿಲೆಗಳಿಲ್ಲದಿದ್ದರೂ ಸಹ ಕೊರೊನಾ‌ ಸೋಂಕಿಗೆ ಬಲಿಯಾದವರೇ ಹೆಚ್ಚು!

ABOUT THE AUTHOR

...view details