ಬಾಗಲಕೋಟೆ:ಜಮೀನು ವಿಚಾರಕ್ಕೆ ಹೊಡೆದಾಟ ನಡೆದು ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ. ನಾಲ್ವರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಹನುಮಂತ (48), ಮಲ್ಲಪ್ಪ (44), ಈಶ್ವರ (40), ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ. 24 ಗುಂಟೆ ಜಮೀನು ಜಾಗ ವಿಚಾರಕ್ಕೆ ಹಿಂದಿನಿಂದಲೂ ಮುದರೆಡ್ಡಿ ಮತ್ತು ಪುಠಾಣಿ ಕುಟುಂಬಸ್ಥರ ಮಧ್ಯೆ ನಡುವೆ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತಲ್ಲದೆ, 2014ರಲ್ಲೇ ರಾಜಿಯಾಗಿ ವಿವಾದ ಅಂತ್ಯಗೊಂಡಿತ್ತು.
ಆದರೆ ಇತ್ತೀಚೆಗೆ ಮತ್ತೆ ಗಲಾಟೆ, ವಿವಾದ ನಡೆಯುತ್ತಿತ್ತು. ಇಂದು ವಿವಾದ ತಾರಕಕ್ಕೇರಿ, ಮುದರೆಡ್ಡಿ ಕುಟುಂಬದ ನಾಲ್ವರನ್ನು ಪುಠಾಣಿ ಕಡೆಯವರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಜಮೀನು ವಿವಾದಕ್ಕೆ ಒಂದೇ ಕುಟುಂಬದ ನಾಲ್ವರ ಕೊಲೆ ಗಲಾಟೆಯಲ್ಲಿ ಮುದರೆಡ್ಡಿ ಕುಟುಂಬದ ನಾಲ್ವರು ಸಹೋದರರ ಹತ್ಯೆ ಆಗಿದೆ. ಸ್ಥಳಕ್ಕೆ ಎಸ್.ಪಿ.ಲೋಕೇಶ್ ಜಗಲಸಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿಂದಿನಿಂದಲೂ ಜಮೀನು ವಿವಾದ ಇದ್ದು, ಈ ಹಿನ್ನೆಲೆ ಗಲಾಟೆ ನಡೆದು, ಮಾರಕಾಸ್ತ್ರ ದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಎಸ್ ಪಿ ಲೋಕೇಶ್ ಜಗಲಸಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಮಾನವೀಯ: ವ್ಯಕ್ತಿಯನ್ನ ಪಿಕಪ್ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದರು... Video