ಬಾಗಲಕೋಟೆ: ಎಸ್.ಆರ್ ಪಾಟೀಲ್ ಹಾಗೂ ಸರ್ನಾಯಕ್ಗೆ ಪಕ್ಷಕ್ಕಿಂತಲೂ ಜನಾಂಗದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಶಕ್ತಿ ತೋರಿಸುತ್ತೇವೆ ಎಂದು ಸ್ವಪಕ್ಷೀಯರ ವಿರುದ್ಧವೇ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಗುಡುಗಿದ್ದಾರೆ.
ನಮ್ಮ ಜನಾಂಗದ ಶಕ್ತಿ ತೋರಿಸುತ್ತೇವೆ.. ಸ್ವಪಕ್ಷೀಯರ ವಿರುದ್ಧ ಕಾಶಪ್ಪನವರ್ ಗುಡುಗು - SR Patil
ಡಿಸಿಸಿ ಬ್ಯಾಂಕ್ನಲ್ಲಿ ಸಾಕಷ್ಟು ಅವ್ಯವಹಾರಗಳಿದ್ದು, ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಎಸ್ ಆರ್ ಪಾಟೀಲ್ ಹಾಗೂ ಸರ್ನಾಯಕ್ ಹತಾಶರಾಗಿದ್ದಾರೆ. ಅವರ ಹುಳುಕು ಮುಂದಿನ ದಿನಗಳಲ್ಲಿ ಹೊರ ಬರುತ್ತವೆ..
ನಗರದಲ್ಲಿ ಮಾತನಾಡಿದ ಅವರು, ಯಾವ ವರಿಷ್ಠರಿಗೂ ನನಗೆ ಹೇಳಲು ಅಧಿಕಾರವಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ್ ಸರ್ನಾಯಕ್ ಸಹಕಾರಿ ಕ್ಷೇತ್ರದಲ್ಲಿ ಪಕ್ಷ ಬರಲ್ಲ ಎಂದಿದ್ರು. ಡಿಸಿಸಿ ಬ್ಯಾಂಕ್ನಲ್ಲಿ ಸಾಕಷ್ಟು ಅವ್ಯವಹಾರಗಳಿದ್ದು, ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಎಸ್ ಆರ್ ಪಾಟೀಲ್ ಹಾಗೂ ಸರ್ನಾಯಕ್ ಹತಾಶರಾಗಿದ್ದಾರೆ. ಅವರ ಹುಳುಕು ಮುಂದಿನ ದಿನಗಳಲ್ಲಿ ಹೊರ ಬರುತ್ತವೆ.
ಬಿಜೆಪಿಯ ಶಿವನಗೌಡ ಅಗಸಿಮುಂದಿನ, ರಾಮಣ್ಣ ತಳೇವಾಡ ಜನಾಂಗದ ಪ್ರೀತಿಗೆ ಅಡ್ಡಮತದಾನ ಮಾಡಿದ್ದಾರೆ. ನನ್ನನ್ನ ವೋಟ್ ಮಾಡಲು ಕರೆದಿದ್ರೆ ನಾನು ಕೂಡಲಸಂಗಮಕ್ಕೆ ಬರ್ತೀನಿ, ನೀವು ಬನ್ನಿ ಆಣೆ ಮಾಡೋಣ ಎಂದು ಸವಾಲ್ ಹಾಕಿದರು.