ಬಾಗಲಕೋಟೆ :ಯಾರೇಪಕ್ಷ ಸೇರಿದರೂ ಸ್ವಾಗತ. ಆದರೆ, ಯಾವುದೇ ಷರತ್ತುಗಳು ಹಾಕುವಂತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು. ಇದಕ್ಕೆಲ್ಲಾ ಸಿದ್ಧವಾಗಿದ್ದರೆ ಮಾತ್ರ ಪಕ್ಷಕ್ಕೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸೇರಲು ಬಿಜೆಪಿ ಮತ್ತು ಜೆಡಿಎಸ್ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಮಾತ್ರ ಹೇಳಲ್ಲ. ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ. ವಿಧಾನಸಭೆಗೂ ರೆಡಿ ಇದ್ದೇವೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೂ ಸಿದ್ಧರಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ಈಗ ಅನೇಕ ಜಿಲ್ಲೆಗಳಲ್ಲಿ ಉಸ್ತುವಾರಿ ಮಂತ್ರಿಗಳಿದ್ರೂ, ಇಲ್ಲದಂಗೆ ಇದ್ದಾರೆ. ಉಸ್ತುವಾರಿಗಳು ಏನೂ ಕೆಲಸ ಮಾಡ್ತಿಲ್ಲ. ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲ್ಲ. ಹೀಗಾಗಿ, ಆಡಳಿತ ಸುಧಾರಿಸುತ್ತಿಲ್ಲ ಎಂದರು.
ಜನರ ಅಹವಾಲು ಸ್ವೀಕಾರ